







ಉಪ್ಪಿನಂಗಡಿ: ಇಲ್ಲಿನ ಕಜೆಕ್ಕಾರ್ ನಿವಾಸಿ ಭಾಗಿ ಎಂಬವರ ಟರ್ಫಾಲಿನ ಗುಡಿಸಲು ಬೀಳುವ ಪರಿಸ್ಥಿತಿಯಲ್ಲಿದ್ದು, ವಿಷಯ ತಿಳಿದ ಪುತ್ತೂರು ಬಿಜೆಪಿ ನಿಯೋಗವು ಅಲ್ಲಿಗೆ ಭೇಟಿ ನೀಡಿ, ಬಡ ಕುಟುಂಬದ ಭಾಗಿ ಅವರಿಗೆ ದಿನಸಿ ಸಾಮಗ್ರಿಗಳನ್ನು ನೀಡಿದೆ.



ಭಾಗಿಯವರು ಟಾರ್ಪಾಲ್ನ ಜೋಪಡಿ ನಿರ್ಮಿಸಿ ಅದರೊಳಗೆ ಬದುಕುತ್ತಿದ್ದರು. ಇವರಿಗೆ ಈಗಾಗಲೇ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮದ ಸವಿ ನೆನಪಿಗಾಗಿ ಮನೆ ನಿರ್ಮಾಣ ಮಾಡಿ ಕೊಡುವುದಾಗಿ ನಿರ್ಣಯಿಸಲಾಗಿದ್ದು, ಈ ಕಾರ್ಯಕ್ಕೆ ಪುತ್ತೂರು ಬಿಜೆಪಿಯೂ ಸಹಕಾರ ನೀಡುವುದಾಗಿ ಈ ಸಂದರ್ಭ ಭರವಸೆ ನೀಡಿತು.



ಭೇಟಿ ನೀಡಿದ ನಿಯೋಗದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ನಗರ ಮಂಡಲ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಕೈಕಾರ, ಪ್ರಧಾನ ಕಾರ್ಯದರ್ಶಿ ಶಶಿಧರ್ ನಾಯಕ್, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ನಾಗೇಶ್ ಟಿ.ಎಸ್. ಕೆಮ್ಮಾಯಿ, ಉಪ್ಪಿನಂಗಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಸುರೇಶ್ ಅತ್ರಮಜಲು, ಶಕ್ತಿಕೇಂದ್ರದ ಅಧ್ಯಕ್ಷ ಪ್ರಸಾದ್, ಪುತ್ತೂರು ನಗರ ಬಿಜೆಪಿಯ ನಾಗೇಂದ್ರ ಬಾಳಿಗ, ನಿತೇಶ್ ಬಲ್ನಾಡು, ಪ್ರವೀಣ್ ಕೇಪುಳು , ಉಪ್ಪಿನಂಗಡಿಯ ಜಯಂತ ಪೊರೋಳಿ, ಹರೀಶ್ ಉಪಸ್ಥಿತರಿದ್ದರು.









