







ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘಟನೆಯಾಗಿರುವ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ದರ್ಬೆತ್ತಡ್ಕದ ವಿಶೇಷ ಚೇತನರಾದ ಮೋಹನ್ರವರಿಗೆ ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡಿದ್ದರು. ಮೋಹನ್ರವರ ಮನೆಗೆ ಸಮಾಜ ಸೇವಕ,ಮುಳುಗು ತಜ್ಞ ಈಶ್ವರ್ ಮಲ್ಪೆಯವರು ಇತ್ತೀಚೆಗೆ ಭೇಟಿ ನೀಡಿ ಮಜ್ಜಾರಡ್ಕ ಸಂಘಟನೆಯವರ ಸಾಮಾಜಿಕ ಕಳಕಳಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.


ವಿಶೇಷ ಚೇತನರಾಗಿರುವ ಮೋಹನ್ರವರಿಗೆ ಮನೆ ನಿರ್ಮಾಣ ಮಾಡಿಕೊಡುವ ಮೂಲಕ ಸಮಾಜ ಮೆಚ್ಚುವ ಕೆಲಸವನ್ನು ಮಾಡಿರುವ ಸಂಘಟನೆಗೆ ವಿಶೇಷ ಅಭಿನಂದನೆ ಸಲ್ಲಿಸಿ ಮುಂದೆ ಸಂಘಟನೆಯ ದಶಮಾನೋತ್ಸವಕ್ಕೆ ಭಾಗವಹಿಸುವುದಾಗಿ ಭರವಸೆ ನೀಡಿದರು. ಈಶ್ವರ್ ಮಲ್ಪೆಯವರಿಗೆ ಸಂಘಟನೆ ಮತ್ತು ಮೋಹನ್ ದರ್ಬೆತ್ತಡ್ಕರವರು ಫಲಪುಷ್ಪಗಳೊಂದಿಗೆ ಶಾಲು, ಹಾಕಿ ಗೌರವಿಸಿದರು.



ಈ ಸಂದರ್ಭದಲ್ಲಿ ಈಶ್ವರ್ ಮಲ್ಪೆ ಅವರ ಸ್ನೇಹಿತ, ಸಂಘಟನೆಯ ಸಂಘಟಕ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ ಮಯೂರ, ಸಂಘಟನೆ ಅಧ್ಯಕ್ಷ ಲೋಕೇಶ್ ಸ್ವಾಮಿನಗರ, ಮಾಜಿ ಅಧ್ಯಕ್ಷ ಸದಾಶಿವ ಮಣಿಯಾಣಿ, ಮಾಜಿ ಪ್ರದಾನ ಕಾರ್ಯದರ್ಶಿ ಯತೀಶ್ ನಾಯ್ಕ್ ಕಠಾರ, ಬೆಳ್ಳಿಪ್ಪಾಡಿ, ಸದಸ್ಯರಾದ ವಿನೋದ್ ಸ್ವಾಮಿನಗರ, ಮನೋಹರ್ ಉಪ್ಪಳಿಗೆ, ಶ್ರವಣ್ ಓಲ್ತಾಜೆ, ಸುಜನ್ ಮಜ್ಜಾರಡ್ಕ ಮತ್ತು ಟೀಮ್ ಈಶ್ವರ್ ಮಲ್ಪೆ ಇದರ ಸದಸ್ಯ ರಕ್ಷಿತ್ ಮಲ್ಪೆ ಉಪಸ್ಥಿತರಿದ್ದರು.










