






. ಗ್ರಾಮೀಣ ಪ್ರದೇಶದಲ್ಲಿ ಅಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸುವ ಅಬ್ದುಲ್ ಅಝೀಝ್ ರವರ 28 ವರ್ಷಗಳ ಹಿಂದಿನ ಯೋಚನೆ ಶ್ಲಾಘನೀಯ ವಿವೇಕ್ ಆಳ್ವ
.ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಿದಾಗ ಉತ್ತಮ ಪದವಿ ಪಡೆಯಲು ಸಾಧ್ಯ ಮೇಘಾ ಬೋರ್ಕರ್
.ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಮೌಲ್ಯಯುತ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ನಾಯಕನಾಗಿ ಮೂಡಿಬರಬೇಕು ಖಲಂದರ್ ಶಾಫಿ
.ವಿದ್ಯಾಸಂಸ್ಥೆ ಇನ್ನಷ್ಟು ಬೆಳಗಲು ಪೋಷಕರ ಸಹಕಾರ ಅಗತ್ಯ ಜನಾಬ್ ಅಬ್ದುಲ್ ಅಜೀಜ್
.ಬುಶ್ರಾ ವಿದ್ಯಾ ಸಂಸ್ಥೆಯಲ್ಲಿ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಭಾತೀಶ ಕನಕಮಜಲು
.ಬುಶ್ರಾ ವಿದ್ಯಾಸ್ಥೆಯಲ್ಲಿ ಮೌಲ್ಯಯುತ ಶಿಕ್ಷಣ ನೀಡಲಾಗುತ್ತಿದೆ- ದೀಪಿಕಾ ಚಾಕೋಟೆ


ಕಾವು:ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಇಲ್ಲಿ 28 ನೇ ವರ್ಷದ ವಾರ್ಷಿಕೋತ್ಸವ- ಬುವಿ ಉತ್ಸವ 2025 ಕಾರ್ಯಕ್ರಮದ ಅಂಗವಾಗಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಡಿ.31ರಂದು ನಡೆಯಿತು.




ಸಭಾ ಕಾರ್ಯಕ್ರಮ
ಗ್ರಾಮೀಣ ಪ್ರದೇಶದಲ್ಲಿ ಅಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸುವ ಅಬ್ದುಲ್ ಅಝೀಝ್ ರವರ 28 ವರ್ಷಗಳ ಹಿಂದಿನ ಯೋಚನೆ ಶ್ಲಾಘನೀಯ – ವಿವೇಕ್ ಆಳ್ವ
ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಎಜುಕೇಶನಲ್ ಫೌಂಡೇಶನ್ ಮೂಡಬಿದ್ರೆ ಇದರ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ 28 ವರ್ಷಗಳ ಹಿಂದೆ ಮೌಲ್ಯಯುತ ಶಿಕ್ಷಣವನ್ನು ನೀಡಬೇಕೆಂಬ ಉದ್ದೇಶದಿಂದ ಅಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸುವ ಯೋಚನೆ ನಿಜಕ್ಕೂ ಶ್ಲಾಘನೀಯ,ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅತೀ ಮುಖ್ಯ ಘಟ್ಟ, ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಂಡು ಕನಸನ್ನು ನನಸಾಗಿಸಲು ಸತತ ಶ್ರಮ ಪಡಬೇಕು.ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಬುಶ್ರಾ ವಿದ್ಯಾ ಸಂಸ್ಥೆ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಿದಾಗ ಉತ್ತಮ ಪದವಿ ಪಡೆಯಲು ಸಾಧ್ಯ – ಮೇಘಾ ಬೋರ್ಕರ್
ಕಾರ್ಯಕ್ರಮದಲ್ಲಿ ಮುಖ್ಯ, ಅತಿಥಿಗಳಾಗಿ ಭಾಗವಹಿಸಿದ್ದ ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಚಿನ್ನದ ಪದಕ ವಿಜೇತ್ ಆಯುರ್ವೇದ ತಜ್ಞೆ ಡಾ.ಮೇಘಾ ಬೋರ್ಕರ್ ಮಾತನಾಡಿ ಗುರುಗಳು ನಮ್ಮ ತಪ್ಪುಗಳನ್ನು ತಿದ್ದಿ ಬೆಳೆಸಿದ್ದರಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು.ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಿದಾಗ ಉತ್ತಮ ಪದವಿ ಪಡೆಯಲು ಸಾಧ್ಯ,ಬುಶ್ರಾ ವಿದ್ಯಾ ಸಂಸ್ಥೆಯ ಉತ್ತಮ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಾರೆ, ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಬುಶ್ರಾ ವಿದ್ಯಾ ಸಂಸ್ಥೆಯ ಕೊಡುಗೆ ಮೆಚ್ಚುವಂಥದ್ದು ಎಂದರು.
ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಮೌಲ್ಯಯುತ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ನಾಯಕನಾಗಿ ಮೂಡಿಬರಬೇಕು- ಖಲಂದರ್ ಶಾಫಿ
ಬುಶ್ರಾ ಎಜುಕೇಶನ್ ಟ್ರಸ್ಟ್ ನಿರ್ದೇಶಕರಾಗಿರುವ ಖಲಂದರ್ ಶಾಫಿ ಮಾತನಾಡಿ ವಿದ್ಯಾರ್ಥಿಗಳು ತರಗತಿಯಲ್ಲಿ ಮಾತ್ರ ಶಿಕ್ಷಣ ಪಡೆಯುವುದಲ್ಲ, ಉತ್ತಮವಾದುದನ್ನು ನೋಡಿ,ಕೇಳಿ ಓದಿ ಕಲಿಯುವುದು ಮುಖ್ಯ, ಉತ್ತಮ ಜ್ಞಾನವಂತರಾಗುವುದೇ ವಿದ್ಯಾರ್ಥಿಗಳ ಗುರಿಯಾಗಬೇಕು,ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಮೌಲ್ಯಯುತ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ನಾಯಕನಾಗಿ ಮೂಡಿಬರಬೇಕು ಎಂದರು.
ವಿದ್ಯಾಸಂಸ್ಥೆ ಇನ್ನಷ್ಟು ಬೆಳಗಲು ಪೋಷಕರ ಸಹಕಾರ ಅಗತ್ಯ- ಜನಾಬ್ ಅಬ್ದುಲ್ ಅಜೀಜ್
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದ ಬುಶ್ರಾ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಜನಾಬ್ ಅಬ್ದುಲ್ ಅಝೀಝ್ ಬುಶ್ರಾ ವಿದ್ಯಾ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ಎಲ್ಲರ ಸಹಕಾರ ಪ್ರೋತ್ಸಾಹದಿಂದ ವಿದ್ಯಾಸಂಸ್ಥೆ ಯಶಸ್ವಿ 28 ವರ್ಷಗಳನ್ನು ಪೂರೈಸಿದೆ,ಸಂಸ್ಥೆ ಇನ್ನಷ್ಟೂ ಬೆಳಗಲು ಪೋಷಕರ ಸಹಕಾರ ಅತೀ ಅಗತ್ಯ, ಯಶಸ್ವಿ ಸಹಕರಿಸಿದ ಆಡಳಿತ ಮಂಡಳಿ,ಮುಖ್ಯ ಗುರುಗಳು, ಶಿಕ್ಷಕ ವೃ0ದ,ರಕ್ಷಕ ಶಿಕ್ಷಕ ಸಂಘ,ಹಿರಿಯ ವಿದ್ಯಾರ್ಥಿ ಸಂಘ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಬುಶ್ರಾ ವಿದ್ಯಾ ಸಂಸ್ಥೆಯಲ್ಲಿ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ – ಬಾತೀಶ ಕನಕ ಮಜಲು
ಡಿಗ್ನಿಟಿ ಗ್ರೂಪ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾತಿಸ ಕನಕಮಜಲು ಮಾತನಾಡಿ ಬುಶ್ರಾ ವಿದ್ಯಾಸಂಸ್ಥೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಹಾಗೂ ಅತ್ಯಂತ ಸುವ್ಯವಸ್ಥಿತವಾಗಿ ಸಮರ್ಪಕವಾದ ಶಿಕ್ಷಣ ಕೊಡುವಲ್ಲಿ ವಿದ್ಯಾಸಂಸ್ಥೆ ಸಫಲವಾಗಿದೆ ಎಂದರು.
ಬುಶ್ರಾ ವಿದ್ಯಾಸ್ಥೆಯಲ್ಲಿ ಮೌಲ್ಯಯುತ ಶಿಕ್ಷಣ ನೀಡಲಾಗುತ್ತಿದೆ- ದೀಪಿಕಾ ಚಾಕೋಟೆ
ವಿದ್ಯಾ ಸಂಸ್ಥೆಯ ಮುಖ್ಯ ಗುರುಗಳಾದ ದೀಪಿಕಾ ಚಾಕೋಟೆ ಮಾತನಾಡಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸದಾ ಶ್ರಮಿಸುತ್ತಿದೆ.ಮಕ್ಕಳನ್ನು ಶಾಲಾ ಕಲಿಕೆಯ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಅಬ್ದುಲ್ ಖಾದರ್ ಹಾಜಿ, ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷರು ಐ.ಸಿ ಕೈಲಾಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಅಕ್ಷತಾ ಬಲ್ಯಯಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಯಸ್ವಿತ್ ಕಾಳಮ್ಮನೆ, ಬುಶ್ರಾ ಎಜುಕೇಶನಲ್ ಟ್ರಸ್ಟ್ ನಿರ್ದೇಶಕರು, ಜಬ್ಬಾರ್ ಆಡಳಿತ ನಿರ್ದೇಶಕರಾದ ಬದ್ರುದ್ದೀನ್,ನಿರ್ದೇಶಕರಾದ ನೂರುದ್ದೀನ್, ಮೋಹಿಶಿನಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು,ಮುಖ್ಯ ಗುರು ದೀಪಿಕಾ ವಾರ್ಷಿಕ ವರದಿ ವಾಚಿಸಿದರು,ಆಡಳಿತ ನಿರ್ದೇಶಕರಾದ ಬದ್ರುದ್ದೀನ್ ಸ್ವಾಗತಿಸಿದರು,ಮೋಹಿಶಿನಾ ವಂದಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಚಿನ್ನದ ಪದಕ ವಿಜೇತ ಆಯುರ್ವೇದ ತಜ್ಞೆ ಡಾ.ಮೇಘಾ ಬೋರ್ಕರ್, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮೂಡಬಿದರೆ ಇದರ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಮತ್ತು 2024- 2025ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹರ್ಷಲ್ ಎಂ ಎಸ್ ಇವರುಗಳನ್ನು ಶಾಲು ಹಾಕಿ, ಪೇಟ ತೊಡಿಸಿ, ಹೂ ಹಾರ ಹಾಕಿ, ಸ್ಮರಣಿಕೆ ಫಲಪುಷ್ಪ ನೀಡಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ತೆರೆದ ವೇದಿಕೆಯಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಾಂಸ್ಕೃತಿಕ ರಸದೌತಣ
ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ಬುಶ್ರಾ ವಿದ್ಯಾಸಂಸ್ಥೆಯ ಎದುರಿನ ಮೈದಾನದಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ತೆರೆದ ವೇದಿಕೆಯಲ್ಲಿ ವಿದ್ಯಾರ್ಥಿಗಳ ಸಮೂಹ ನೃತ್ಯ,ಕರಾಟೆ ಹಾಗೂ ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಮನಸೂರೆಗೊಂಡಿತು










