ಜ.9: ಪಲ್ಲತ್ತಾರು ಶ್ರೀ ಮಲೆ ಉಳ್ಳಾಕುಲು ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ, ತಂಬಿಲ ಸೇವೆ

0

ಪುತ್ತೂರು: ಒಳಮೊಗ್ರು ಗ್ರಾಮದ ಪಲ್ಲತ್ತಾರು ಶ್ರೀ ಮಲೆ ಉಳ್ಳಾಕುಲು ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಮಲೆ ಉಳ್ಳಾಕುಲು ಮತ್ತು ನಾಗದೇವರ ಸನ್ನಿಧಾನದಲ್ಲಿ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನಿರ್ದೇಶನದಂತೆ ಕ್ಷೇತ್ರ ಪುರೋಹಿತರಾದ ವೇದಮೂರ್ತಿ ದಿನೇಶ ಮರಡಿತ್ತಾಯ ಗುಮ್ಮಟೆಗದ್ದೆಯವರ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಜ.9ರಂದು ಜರಗಲಿದೆ.

ಬೆಳಿಗ್ಗೆ 7-30ರಿಂದ ಗಣಹೋಮ, ಪಲ್ಲತ್ತಾರು ಶ್ರೀ ಮಲೆ ಉಳ್ಳಾಕುಲು, ಧೂಮಾವತಿ, ಪಿಲಿ ಚಾಮುಂಡಿ ದೈವ ಮತ್ತು ನಾಗ ದೇವರಿಗೆ ತಂಬಿಲ ಸೇವೆ ನಡೆದು ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6-೦೦ರಿಂದ ಶ್ರೀ ಗುಳಿಗ, ಬೈರವ ದೈವಗಳಿಗೆ ತಂಬಿಲ ಸೇವೆ ನಡೆದು ರಾತ್ರಿ ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಡಳಿತ ಮಂಡಳಿಯ ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳ ಮತ್ತು ಊರ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here