







ಉಪ್ಪಿನಂಗಡಿ: ಟರ್ಪಾಲಿನ ಜೋಪಡಿಯಲ್ಲಿ ವಾಸಿಸುತ್ತಿದ್ದ ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರ್ ನಿವಾಸಿ ಭಾಗಿ ಎಂಬ ಮಹಿಳೆಗೆ ಸುಸ್ಥಿತಿಯ ಮನೆ ನಿರ್ಮಿಸಲು ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಮುಂದಾಗಿದ್ದು, ಇವರ ನೂತನ ಮನೆಗೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಲಾಯಿತು.


ಈ ಸಂದರ್ಭ ರಾಜ್ಯ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ, ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸುವರ್ಣ ಮಹೋತ್ಸವದ ಈ ಸಮಯದಲ್ಲಿ ಸಂಕಷ್ಠದಲ್ಲಿರುವ ಮಹಿಳೆಯೋರ್ವರಿಗೆ ಸುಸ್ಥಿತಿಯ ಮನೆಯೊಂದನ್ನು ನಿರ್ಮಿಸಲು ಮುಂದಾಗಿರುವುದು ನೈಜ ದೇವತಾ ಸೇವೆಯಾಗಿದೆ ಎಂದರು.



ಉಪ್ಪಿನಂಗಡಿಯ ಶ್ರೀ ರಾಮ ಶಾಲಾ ಸಂಚಾಲಕ ಯು.ಜಿ. ರಾಧಾ ಮನೆ ನಿರ್ಮಾಣದ ಕಾರ್ಯಕ್ಕೆ ಮೊದಲ ದೇಣಿಗೆಯನ್ನು ಹಸ್ತಾಂತರಿಸಿ, ಸಾಮರಸ್ಯ ಸಮಾಜದಲ್ಲಿ ದುಃಖಿತರ ಸೇವೆಗೆ ಬಹಳಷ್ಟು ಮಹತ್ವವಿದೆ. ಈ ನಿಟ್ಟಿನಲ್ಲಿ ಮಹಿಳೆಯ ಸಂಕಷ್ಠವನ್ನು ಅರಿತೊಡನೆ ಸುದೃಢ ಮನೆ ನಿರ್ಮಾಣಕ್ಕೆ ಮುಂದಾಗಿರುವ ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯ ಶ್ಲಾಘನೀಯವೆಂದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್ ಮಾತನಾಡಿ, ಸಂಕಷ್ಠಕ್ಕೆ ನೆರವಾಗುವುದೇ ಮಾನವನ ಮೂಲ ಗುಣ. ಇದನ್ನೇ ದೇವರ ನಿಜವಾದ ಸೇವೆ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಬಡ ಮಹಿಳೆಯ ಮನೆ ನಿರ್ಮಾಣಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡಲಾಗುವುದೆಂದರು.
ಕಾರ್ಯಕ್ರಮದಲ್ಲಿ ಈ ಕಜೆಕ್ಕಾರ್ ಕಾಲನಿಯ ಎಲ್ಲಾ ನಿವಾಸಿಗರಿಗೆ ಅವರವರ ಮನೆಯ ಅಡಿಸ್ಥಳವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರು ಉದಾರವಾಗಿ ಒದಗಿಸುವ ಮಾತುಕತೆ ನಡೆಸಿ ಪೂರಕ ಸಹಕಾರ ನೀಡಿದ್ದ ಶಾಸಕ ಅಶೋಕ್ ಕುಮಾರ್ ರೈ ರವರ ಸಹಕಾರವನ್ನು ಶ್ಲಾಘಿಸಲಾಯಿತು.
ಮಾಜಿ ಶಾಸಕ ಸಂಜೀವ ಮಠಂದೂರು, ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ, ಪ್ರಮುಖರಾದ ಡಾ. ರಾಜಾರಾಮ್ ಕೆ.ಬಿ., ಸುನೀಲ್ ಕುಮಾರ್ ದಡ್ಡು, ವಿದ್ಯಾಧರ ಜೈನ್, ವೆಂಕಪ್ಪ ಪೂಜಾರಿ, ಸುಧಾಕರ ಶೆಟ್ಟಿ, ಅನುರಾಧ ಶೆಟ್ಟಿ, ಮಾಧವಿ ರೈ, ಸೋಮನಾಥ, ಮಹಾಲಿಂಗ, ಸುಜಾತಕೃಷ್ಣ ಆಚಾರ್ಯ, ಉಷಾ ಮುಳಿಯ, ಸುರೇಶ್ ಅತ್ರಮಜಲು, ಲೋಕೇಶ್ ಬೆತ್ತೋಡಿ, ರಾಮಚಂದ್ರ ಮಣಿಯಾಣಿ, ಗುಣಕರ ಅಗ್ನಾಡಿ, ಜಯಂತ ಪೊರೋಳಿ, ಪ್ರಸನ್ನ ಪೆರಿಯಡ್ಕ, ವನಿತಾ ಜಯಂತಿ, ಪುರುಷೋತ್ತಮ ಮುಂಗ್ಲಿಮನೆ, ಅಶೋಕ್ ಕುಮಾರ್ ರೈ ಅರ್ಪಿನಿಗುತ್ತು, ನಾಗೇಶ್, ದಯಾನಂದ ಉಜಿರೆಮಾರ್, ಸಂತೋಷ್ ಕೈಕಾರ, ಹರಿಪ್ರಸಾದ್ ಯಾದವ್, ಶಶಿಧರ್ ನಾಯ್ಕ್, ಬಾಲಚಂದ್ರ ಶೆಟ್ಟಿ, ಜಯಗೋವಿಂದ ಶರ್ಮ, ಯತೀಶ್ ಶೆಟ್ಟಿ, ಶಶಿಧರ್ ಶೆಟ್ಟಿ, ಹರೀಶ್ ನಾಯಕ್, ಜಗದೀಶ್ ಶೆಟ್ಟಿ ಮೊದಲಾದವರು ಭಾಗವಹಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ವಂದಿಸಿದರು.










