






ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜ.14 ಮಕರ ಸಂಕ್ರಾಂತಿಯಂದು ಬೆಳಿಗ್ಗೆ ನಾಗತಂಬಿಲ,ದೈವಗಳಿಗೆ ತಂಬಿಲ ಮಧ್ಯಾಹ್ನ ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.


ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ರಾತ್ರಿ ಶ್ರೀ ದೇವಿಗೆ ರಂಗಪೂಜೆ ಧಾರ್ಮಿಕ ಸಭೆ ನಡೆಯಲಿದೆ. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿಯವರು ವಹಿಸಲಿದ್ದು, ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ, ಪ್ರಗತಿಪರ ಕೃಷಿಕರಾದ ವಿಶ್ವೇಶ್ವರ ಭಟ್ ಎಲಿಯೂರು ಕೋಡಿಂಬಾಳ, ಪುತ್ತೂರು ಅಕ್ಷಯ ಕಾಲೇಜ್ ನ ಅಧ್ಯಕ್ಷರಾದ ಜಯಂತ ನಡುಬೈಲು, ಪ್ರಗತಿಪರ ಕೃಷಿಕರಾದ ಲಕ್ಷ್ಮಣ ಗೌಡ ಕರಂದ್ಲಾಜೆ ಅತಿಥಿಗಳಾಗಿ ಭಾಗವಹಿಸಲಿದ್ದು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಎಂ. ಗೋಪಾಲಕೃಷ್ಣ ಪಡ್ಡಿಲ್ಲಾಯ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ.ಹೇಮಂತ್ ರೈ ಮನವಳಿಕೆಗುತ್ತು ರವರ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆದು ನಂತರ ಬಲಿಹೊರಟು ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಮಕರ ಸಂಕ್ರಾಂತಿಯ ಪುಣ್ಯ ಕಾಲದಲ್ಲಿ ಜರಗುವ ಈ ಎಲ್ಲಾ ಉತ್ಸವಕ್ಕೆ ಎಲ್ಲಾ ಭಕ್ತಾಧಿಗಳು ಅಗಮಿಸುವಂತೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ.ಸುಬ್ರಹ್ಮಣ್ಯ ರಾವ್ ನಗ್ರಿ ಮತ್ತು ಸದಸ್ಯರು, ಪವಿತ್ರಪಾಣಿಗಳಾದ ಹರೀಶ ಆಚಾರ್ಯ ನಗ್ರಿಗುತ್ತು ಮತ್ತು ಅರ್ಚಕರು, ಸಿಬ್ಬಂದಿ ವರ್ಗಮತ್ತು ಸೀಮೆಯ ಹತ್ತು ಸಮಸ್ತರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಹೇಮಂತ್ ರೈ ಮನವಳಿಕೆಗುತ್ತು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













