ಪುರುಷರಕಟ್ಟೆ ಸರಸ್ವತಿ ಶಾಲೆಯಲ್ಲಿ ‘ರಾಷ್ಟ್ರೀಯ ಯುವ ದಿನ’ ಆಚರಣೆ

0

ಪುತ್ತೂರು : ಪುರುಷರಕಟ್ಟೆ ಸರಸ್ವತಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಶಾಲಾ ಸಂಚಾಲಕರಾದ ಅವಿನಾಶ್ ಕೊಡಂಕಿರಿ ಇವರು ವಿವೇಕಾನಂದರ ಜೀವನ, ಸಾಧನೆ ಮತ್ತು ಸಂದೇಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿಸ್ತಾರವಾಗಿ ತಿಳಿಸಿದರು. ಶಾಲಾ ಆಡಳಿತಾಧಿಕಾರಿ ಶ್ರೀಮತಿ ಶುಭಾ ಅವಿನಾಶ್, ಮುಖ್ಯ ಶಿಕ್ಷಕಿ ಅಖಿಲಾ ಕೆ ಬಿ, ಶಿಕ್ಷಣ ಸಂಯೋಜಕರಾದ ಶ್ರೀಲಕ್ಷ್ಮೀ ಮೊಳೆಯಾರ್, ಕ್ಯಾಂಪಸ್ ಮೆನೇಜರ್ ಕೃಷ್ಣಪ್ಪ ಬಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಬಾವಚಿತ್ರಕ್ಕೆ ಪುಷ್ಷಾರ್ಚನೆ ಗೈದರು. 8ನೇ ತರಗತಿಯ ವೈಭವ್, ಹಿತಾನ್ ಮತ್ತು ಅನೀಶ್ ಧ್ಯೇಯೋಕ್ತಿಗಳನ್ನು ವಾಚಿಸಿದರು. ಮಾನ್ಯ ಡಿ. ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here