






ದೇವರ ಸೇವೆ ಮಾಡಲು ನಾನಾ ರೀತಿಯ ಮಾರ್ಗಗಳಿವೆ ಅದರಲ್ಲಿ ಕಲಾಮಾತೆಯ ಸೇವೆಯು ಒಂದು: ಶ್ರೀ ಶ್ರೀಕೃಷ್ಣ ಗುರೂಜಿ


ವಿಟ್ಲ: ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ರವರ ಮಾರ್ಗದರ್ಶನದಲ್ಲಿ ದಯಾ ಕ್ರಿಯೇಷನ್ ಬಾಯಾರು ಹಾಗೂ ದಯಾ ಮೆಲೋಡಿಸ್ ಮ್ಯೂಸಿಕಲ್ ಇದರ ಪಂಚಮ ವರ್ಷದ ಸಂಭ್ರಮಾಚರಣೆ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.



ಈ ಸಂದರ್ಭದಲ್ಲಿ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಾಸ್ಥಾನದ ಧರ್ಮದರ್ಶಿಗಳಾದ ಶ್ರೀ ಶ್ರೀಕೃಷ್ಣ ಗುರೂಜಿರವರು ಮಾತನಾಡಿ ದೇವರ ಸೇವೆ ಮಾಡಲು ನಾನಾ ರೀತಿಯ ಮಾರ್ಗಗಳು ಇದರಲ್ಲಿ ಕಲಾಮಾತೆಯ ಸೇವೆಯು ಒಂದು ದೊಡ್ಡ ಸೇವೆ ತಮ್ಮ ತಂಡಕ್ಕೆ ಕಲಾಮಾತೆಯ ಅನುಗ್ರಹ ಸದಾ ಇರಲಿ ಎಂದರು.
ಕ್ಷೇತ್ರದ ಮೊಕ್ತೇಸರರಾದ ಎಂ. ಕೆ. ಕುಕ್ಕಾಜೆರವರು ಅಧ್ಯಕ್ಷತೆ ವಹಿಸಿದ್ದರು. ಮಾಣಿಲ ಗ್ರಾ.ಪಂ. ಅಧ್ಯಕ್ಷರಾದ ಶ್ರೀಧರ್ ಬಾಳೆಕಲ್ಲು, ನಿವೃತ್ತ ಅಧ್ಯಾಪಕರಾದ ಶೇಖರ ಶೆಟ್ಟಿ ಬಾಯಾರು, ವಿಶೇಷ ಚಾನಲ್ನ ಸಂಪಾದಕರಾದ ಜಯಾ ಮಣಿಯಂಪಾರೆ, ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪ ಕಾಮಜಾಲು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ತಾರಿದಳ ಇದರ ಅಧ್ಯಕ್ಷರಾದ
ಸಂಜೀವ ಕುಲಾಲ್ ಪಳನೀರು, ದಯಾ ಕ್ರಿಯೇಷನ್ ಬಾಯಾರು ಇದರ ಸ್ಥಾಪಕರಾದ ದಯಾನಂದ ಅಮೀನ್ ಬಾಯಾರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಾದ ಕೊರಗಪ್ಪ ಪೂಜಾರಿ ಬಾಳೆಕಲ್ಲು , ಸುದರ್ಶನ ತಾರಿದಳ,ಶ್ವೇತ ಪ್ರವೀಣ್ ಆಚಾರ್ಯ ಮೂಡುಬಿದಿರೆ, ದಿನೇಶ್ ಮಿತ್ತನಡ್ಕ, ಕುಶಿ ವಿಟ್ಲ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಸದಸ್ಯರಾದ ಸುಶ್ಮಿತ,ಶ್ರೀಜಾ ಕುಕ್ಕಾಜೆ, ಸುಪ್ರಿತ ಕುಕ್ಕಾಜೆ, ಸನ್ಮಾನ ಪತ್ರ ವಚಿಸಿದರು.ದೇವಿ ಪ್ರಸಾದ್ ಕುಕ್ಕಾಜೆ ಸ್ವಾಗತಿಸಿ , ಸತ್ಯ ಪ್ರಸಾದ್ ಕುಕ್ಕಾಜೆ ವಂದಿಸಿದರು.ರವಿ ಎಸ್ ಎಂ ಕುಕ್ಕಾಜೆ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಪಂದನ ಕಲಾವಿದರು ಬಂಟ್ವಾಳ ಇವರಿಂದ ‘ಸಾದಿ ತಿಕ್ಕುಜಿ’ ನಾಟಕ ನಡೆಯಿತು.










