







ಕಡಬ: ಇಲ್ಲಿನ ಕಾಲೇಜು ರಸ್ತೆಯ ಬೈಪಾಸ್ ಜಂಕ್ಷನ್‌ನಲ್ಲಿದ್ದ ಅಪಾಯಕಾರಿ ಹೊಂಡಗಳನ್ನು ಕಡಬ ಪಟ್ಟಣ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಬೈಲಂಗಡಿ ಹಾಗೂ ರೋಹಿತ್ ಪಿ.ಜೆ.ರವರ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ಜ.13ರಂದು ಶ್ರಮದಾನದ ಮೂಲಕ ಮಣ್ಣು, ಕಲ್ಲು ಹಾಕಿ ಮುಚ್ಚಲಾಯಿತು.


ಈ ಶ್ರಮದಾನದಲ್ಲಿ ಊರಿನ ಪ್ರಮುಖರಾದ ಸಾಮಾಜಿಕ ಕಾರ್ಯಕರ್ತ ಮುರಳಿ ಮೂರಾಜೆ, ಈಶ್ವರ ಗೌಡ ಅಮೈ, ಹರೀಶ್ ಪಣೆಮಜಲು, ಸುಧೀರ್ ಪಣೆಮಜಲು, ಗಂಗಾಧರ ಗೌಡ ಅಂಗಣ ಪಣೆಮಜಲು ಮತ್ತಿತರರು ಸಹಕರಿಸಿದರು.













