






ನೇಮೋತ್ಸವವು ಎಲ್ಲರ ಸಹಕಾರದಂತೆ ಯಶಸ್ವಿಯಾಗಿ ನೆರವೇರಲಿ-ರವೀಂದ್ರ ಶೆಟ್ಟಿ ನುಳಿಯಾಲು


ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ-ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಜ.25 ರಂದು ವಾರ್ಷಿಕ ನೇಮೋತ್ಸವ ಜರಗಲಿದ್ದು, ಇದರ ಪೂರ್ವ ಸಿದ್ಧತಾ ಸಭೆಯು ಜ.18 ರಂದು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ಅಧ್ಯಕ್ಷತೆಯಲ್ಲಿ ಸಂಜೆ ನೆರವೇರಿತು.




ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಮಾತನಾಡಿ, ಕೊರಗಜ್ಜರ ಆಶೀರ್ವಾದದಿಂದ ದಾನಿಗಳ, ಭಕ್ತರ ನೆರವಿನಿಂದ ಶ್ರೀ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ. ಶ್ರೀ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಪರಸ್ಪರ ಸಹಕಾರ, ತಾಳ್ಮೆ ಅಗತ್ಯ. ಸಂಕ್ರಮಣದಂದು ಸಾಕಷ್ಟು ಅಗೇಲು ಸೇವೆ ನಡೆಯುತ್ತಿರುವುದು ಕ್ಷೇತ್ರದ ಪಾವಿತ್ರ್ಯತೆ ತಿಳಿಸುತ್ತದೆ. ಕಳೆದ ವರ್ಷವೂ ಶ್ರೀ ಕ್ಷೇತ್ರದಲ್ಲಿ ನೇಮೋತ್ಸವವು ವೈಭವದಿಂದ ಜರಗಿದ್ದು ಅಷ್ಟ ಧಿಕ್ಕುಗಳಿಂದ ಆಗಮಿಸಿದ ಜನಸಾಗರವೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ನಡೆಯುತ್ತಿರುವ ನೇಮೋತ್ಸವವು ಎಲ್ಲರ ಸಹಕಾರದಂತೆ ಯಶಸ್ವಿಯಾಗಿ ನೆರವೇರಲಿ ಎಂದರು.
ಈ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆ ಹಂಚಿಕೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ದೈವದ ಪ್ರಧಾನ ಅರ್ಚಕರಾದ ಕುಂಡ ಮಣ್ಣಾಪು, ಅಧ್ಯಕ್ಷ ವಿಶ್ವನಾಥ್ ಮಣ್ಣಾಪು, ಸುಧೀರ್ ಅತ್ತಾಳ, ನಾಗೇಶ್ ಮಣ್ಣಾಪು, ಸಹ್ಯಾದ್ರಿ ಸೌಂಡ್ಸ್ ಮತ್ತು ಲೈಟಿಂಗ್ಸ್ ನ ಭವಿತ್, ಜಯರಾಮ್ ಕೆಮ್ಮಿಂಜೆ, ಗುರುವ ಮಣ್ಣಾಪು, ಪುತ್ರ, ಸುಜೀರ್ ಶೆಟ್ಟಿ ನುಳಿಯಾಲು, ಲೋಕೇಶ್ ಮಣ್ಣಾಪು, ಉಮೇಶ್ ಮಣ್ಣಾಪು, ಪಂಚಮಿ ಶಾಮಿಯಾನದ ವಿಶ್ವನಾಥ ನಾಯ್ಕ ಸಹಿತ ಹಲವರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದ ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಮೊಟ್ಟೆತ್ತಡ್ಕ ಸ್ವಾಗತಿಸಿ, ವಂದಿಸಿದರು.










