ಸಂಟ್ಯಾರು ಸರಸ್ವತಿಪುರಂ ನಲ್ಲಿ ಕುಣಿತ ಭಜನೆ ತರಬೇತಿ ಆರಂಭ

0

ಪುತ್ತೂರು : ಸಂಟ್ಯಾರಿನ‌ ಸರಸ್ವತಿಪುರಂ ನಲ್ಲಿರುವ ಸರಸ್ವತಿ ಸದನದಲ್ಲಿ ಕುಣಿತ ಭಜನಾ ತರಬೇತಿ ಉದ್ಘಾಟನೆಗೊಂಡಿತು.

ಭಾಲಾವಲೀಕಾರ್ ಗೌಡ ಸಾರಸ್ವತ ಸಮಾಜ ಸೇವಾ ಸಂಘ (ರಿ) ದರ್ಬೆ ಪುತ್ತೂರು ಇದರ ಅಧ್ಯಕ್ಷ ರಮೇಶ್ ಪ್ರಭು ದೀಪ ಪ್ರಜ್ವಲನೆ ಮಾಡಿ ಕುಣಿತ ಭಜನಾ ತರಬೇತಿಯು ಯಶಸ್ವಿಯಾಗಲಿ, ಯುವ ಭಜಕರಿಗೆ ವೇದಿಕೆಯಾಗಲಿ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ಆರ್ಯಾಪು ಗ್ರಾಮಪಂಚಾಯತ್ ಸದಸ್ಯ ಹರೀಶ್ ನಾಯಕ್ ಸಂಟ್ಯಾರು ಮತ್ತು ತರಬೇತುದಾರ ಧನಂಜಯ ಕುಮಾರ್ ಸಿ‌.ಟಿ ಬೆಟ್ಟಂಪಾಡಿ ಉಪಸ್ಥಿತರಿದ್ದರು. ಭವ್ಯ ಮರಿಕೆ ಕಾರ್ಯಕ್ರಮ ನಿರೂಪಿಸಿದರು .

LEAVE A REPLY

Please enter your comment!
Please enter your name here