







ನಿಡ್ಪಳ್ಳಿ; ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇಲ್ಲಿಯ ದೈವಗಳ ಜಾತ್ರೋತ್ಸವವು ನಿಡ್ಪಳ್ಳಿ ಉಳ್ಳಾಕುಲು ಮಾಡದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ್ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು ಧ್ವಜಾರೋಹಣ ಮೂಲಕ ಚಾಲನೆ ನೀಡಲಾಯಿತು.


ಜ.19 ರಂದು ರಾತ್ರಿ ಗುತ್ತುಚಾವಡಿಯಿಂದ ಪಿಲಿಭೂತ ಹಾಗೂ ಮಲರಾಯ ದೈವಗಳ ಭಂಡಾರ ಮುಂಡೂರು ಸ್ಥಾನಕ್ಕೆ ತೆರಳಿ ತಂಬಿಲ ನಡೆದು ಅಲ್ಲಿಂದ ಉಳ್ಳಾಕುಲು ಮಾಡಕ್ಕೆ ತೆರಳಲಾಯಿತು.



ಜ. 20 ರಂದು ಪ್ರಾತಃಕಾಲ ಉಳ್ಳಾಕುಲು ಮಾಡದಲ್ಲಿ ಮಕರ ತೋರಣ ಏರಿಸಿ ನಂತರ ದೈವಗಳಿಗೆ ಶುದ್ದಿ ಕಲಶ ಆಗಿ ಧ್ವಜಾರೊಹಣ ನಡೆದು ತಂಬಿಲ ಸೇವೆ ನಡೆಯಿತು.
ಅನುವಂಶಿಕ ಆಡಳಿತ ಮೊಕ್ತೇಸರರಾದ ಪ್ರವೀಣ್ ಎನ್. ಆರಿಗ ನಿಡ್ಪಳ್ಳಿ ಗುತ್ತು, ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು, ಭರತ್ ಕುಮಾರ್ ಆರಿಗ ಪುತ್ತೂರು ಪಟ್ಟೆ ಗುತ್ತು, ಬಾರಿಕೆ ಮನೆಯವರು ಹಾಗೂ ಭಕ್ತಾದಿಗಳು ಪಾಲ್ಗೊಂಡರು.










