







ಪುತ್ತೂರು: ಡಿಆರ್‌ಡಿಒ ಮಾಜಿ ಮುಖ್ಯ ಪಿಆರ್‌ಒ ಮತ್ತು ಕನ್ನಡ ಲೇಖಕ ಜಯಪ್ರಕಾಶ್ ರಾವ್‌ರವರು ತಮ್ಮ ಎಂಟನೇ ಪುಸ್ತಕ “ವೈಕ್ತಿತ್ವ ವಿಕಾಸನ ವಿಚಾರ ಧಾರೆ” ಯುವಜನರಿಗಾಗಿ ಉದ್ದೇಶಿಸಲಾದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಕನ್ನಡ ಕೈಪಿಡಿಯ ಮೊದಲ ಪ್ರತಿಯನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋರವರಿಗೆ ನೀಡಿದರು.


ಕಾಲೇಜಿನ ಉಪಪ್ರಾಂಶುಪಾಲರಾದ ವಿಜಯ ಕುಮಾರ್ ಮೊಳೆಯಾರ್ ಉಪಸ್ಥಿತರಿದ್ದರು. ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಜಯಪ್ರಕಾಶ್ ರಾವ್‌ರವರು ಜೆಸಿಐ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಅಧ್ಯಾಪಕರಾಗಿದ್ದಾರೆ ಮತ್ತು ಪುತ್ತೂರು ಜೇಸೀಸ್ ಚಾಪ್ಟರ್ ಸದಸ್ಯರಾಗಿದ್ದರು.













