






ಪುತ್ತೂರು: ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ 38ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಜ.22ರಂದು ನಡೆಯಿತು. ಬೆಳಗ್ಗೆ ಪ್ರಾತಃಕಾಲದ ಪೂಜೆ, ಅಭಿಷೇಕ, ಹೋಮ ಹವನಾದಿಗಳು ನಡೆಯಿತು. ಮದ್ಯಾಹ್ನ ಗುರುಗಳಿಗೆ ಮಹಾಪೂಜೆ ನೆರವೇರಿಸಲಾಯಿತು. ಸಂಜೆ ಸಂಗೀತ ಕಾರ್ಯಕ್ರಮ, ರಂಗಪೂಜೆ, ರಥೋತ್ಸವ, ವಸಂತ ಕಟ್ಟೆಪೂಜೆ ಮತ್ತು ಅಷ್ಟಾವಧಾನ ಸೇವೆ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು.












