ಸವಣೂರು ಗ್ರಾ.ಪಂ.: ವಿಶೇಷಚೇತನರ ಸಮನ್ವಯ ಗ್ರಾಮಸಭೆ

0

ಸವಣೂರು : ಸವಣೂರು ಗ್ರಾಮ ಪಂಚಾಯತ್ ವತಿಯಿಂದ ವಿಶೇಷಚೇತನರ ಸಮನ್ವಯ ಗ್ರಾಮಸಭೆಯು ಸವಣೂರು ಗ್ರಾಮ ಪಂಚಾಯತ್‌ನ ಕುಮಾರಧಾರ ಸಭಾಭವನ ಸಭಾಗಂಣದಲ್ಲಿ ನಡೆಯಿತು.

ಸವಣೂರು ಗ್ರಾ.ಪಂ. ಅಧ್ಯಕ್ಷೆ ಸುಂದರಿ ಬಿ.ಎಸ್ ಅವರು ಅಧ್ಯಕ್ಷತೆ ವಹಿಸಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ಪೆರಾಬೆ ಗ್ರಾ.ಪಂ. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮುತ್ತಪ್ಪ ಅವರು, ವಿಕಲಚೇತನರಿಗೆ ಸಿಗುವ ಸವಲತ್ತು ಹಾಗು ವಿಕಲಚೇತನ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗ್ರಾ.ಪಂ. ಲೆಕ್ಕ ಸಹಾಯಕಿ ಜಯಂತಿ.ಕೆ ,ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು ಉಪಸ್ಥಿತರಿದ್ದರು. ಸಭೆಯಲ್ಲಿ ಸವಣೂರು ಗ್ರಾ.ಪಂ.ನ ಪಾಲ್ತಾಡಿ,ಸವಣೂರು,ಪುಣ್ಚಪ್ಪಾಡಿ ಗ್ರಾಮದ ವಿಕಲಚೇತನರು ಹಾಗೂ ಅವರ ಪೋಷಕರು ಮತ್ತು ಆಶಾಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತ ಯರು,ಸಿಬ್ಬಂದಿ ವರ್ಗದವರು,ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.

ಸವಣೂರು ಪಂಚಾಯತ್ ನ ಪುನರ್ವಸತಿ ಕಾರ್ಯಕರ್ತೆ ಶೀಮತಿ ದೀಪಿಕಾ ಈ ವರ್ಷದ ವರದಿಯನ್ನು ಓದಿ ಹೇಳಿದರು ಗ್ರಾ.ಪಂ.ನ ಲೆಕ್ಕ ಸಹಾಯಕಿ ಜಯಂತಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here