







ಅಧ್ಯಕ್ಷ; ಪ್ರತಾಪಚಂದ್ರ ರೈ, ಉಪಾಧ್ಯಕ್ಷ; ಜನಾರ್ದನ ಗೌಡ ಬರೆಮೇಲು


ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಶಾಂತಿನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರತಾಪ ಚಂದ್ರ ರೈ ಕುದ್ಮಾರುಗುತ್ತು ಹಾಗೂ ಉಪಾಧ್ಯಕ್ಷರಾಗಿ ಜನಾರ್ದನ ಗೌಡ ಬರೆಮೇಲು ಪುನರಾಯ್ಕೆಗೊಂಡಿದ್ದಾರೆ.



ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆದ ನೂತನ ಆಡಳಿತ ಮಂಡಳಿಯ ನಿರ್ದೇಶಕರ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ನಿರ್ದೇಶಕರಾದ ಸೂರಪ್ಪ ಗೌಡ ಅನಾಲು, ದೇಜಪ್ಪ ಗೌಡ ಬಾಂಕೋಡಿ, ಸಂಜೀವ ಗೌಡ ಮುರಿಯೇಲು, ಸದಾನಂದ ಪೂಜಾರಿ ಮುರಿಯೇಲು, ಬಾಲಕೃಷ್ಣ ಗೌಡ ಆರಕರೆ, ಗುಮ್ಮಣ್ಣ ಗೌಡ ಡೆಂಬಲೆ, ಪುರುಷೋತ್ತಮ ಗುರುಂಪು, ನಂದಿನಿನಾರಾಯಣ ಪೂಜಾರಿ ಡೆಂಬಲೆ, ಸೀತಮ್ಮ ಈಶ್ವರ ಗೌಡ ಶಾಂತಿನಗರ, ವಾಮನ ನಾಯ್ಕ ನೂಜೋಲು, ಚೋಮಯ್ಯ ಶಾಂತಿನಗರ ಸಭೆಯಲ್ಲಿ ಉಪಸ್ಥಿತರಿದ್ದರು. ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಮಂಗಳೂರು ಇಲ್ಲಿನ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ. ಆಯ್ಕೆ ಪ್ರಕ್ರಿಯೆ ನಡೆಸಿದರು. ಸಂಘದ ಕಾರ್ಯದರ್ಶಿ ರಜತ್ಕುಮಾರ್ ಸಹಕರಿಸಿದರು.










