ಕೊಪ್ಪ ಶಾಲೆಯಲ್ಲಿ 77 ನೇ ಗಣರಾಜ್ಯ ದಿನಾಚರಣೆ

0

ಕಾಣಿಯೂರು: ಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.


ಧ್ವಜಾರೋಹಣಗೈದು ಸಭಾಧ್ಯಕ್ಷತೆಯನ್ನು ವಹಿಸಿದ ಎಸ್ ಡಿ ಎಂ ಸಿ ಅಧ್ಯಕ್ಷ ಸೀತಾರಾಮ ಕೊಪ್ಪ ಶುಭ ಹಾರೈಸಿದರು. ಶಾಲೆಗೆ ದೇಣಿಗೆಯನ್ನು ನೀಡಿದ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರವೀಣ್ ಕುಂಟ್ಯಾನ ಶಾಲೆಯ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು ಎಂದರು. ಬಳಿಕ “ನಮ್ಮ ದೃಷ್ಟಿ ಮಾದರಿ ಶಾಲೆಯ ಸೃಷ್ಟಿ” ಎನ್ನುವ ಪರಿಕಲ್ಪನೆಯ ಅಭಿವೃದ್ಧಿಗೆ ದೇಣಿಗೆ ನೀಡಿದ ಚಂದ್ರಕಲಾ ಜಯರಾಮ್ ಅರುವ ಗುತ್ತು, ಪ್ರವೀಣ್ ಕುಂಟ್ಯಾನ, ವಸಂತ ಕುಂಬಾರ ಕೊಪ್ಪ, ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸಂಘದ ಪದಾಧಿಕಾರಿಗಳಿಗೆ ಕೃತಜ್ಞತಾ ಪತ್ರದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಎಸ್ ಡಿ ಎಂ ಸಿ ಉಪಾಧ್ಯಕ್ಷೆ ರಮಣಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಂದರ ದೇವಸ್ಯ, ಎಸ್ ಡಿ ಎಂ ಸಿ ಗೌರವ ಸಲಹೆಗಾರ ಜನಾರ್ಧನ ಗೌಡ ಕೆಳಗಿನಕೇರಿ, ಊರಿನ ಹಿರಿಯರಾದ ವಸಂತ ಕುಂಬಾರ ಕೊಪ್ಪ, ದೈಪಿಲ ಕ್ರೀಡಾ ಸೇವಾ ಸಂಘದ ಅಧ್ಯಕ್ಷ ಗಣೇಶ, ಮುಖ್ಯಗುರು ಜ್ಯೋತಿ ದೇವರಮನೆ ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿನಿಯರಾದ ಆಶಿಕ ಮತ್ತು ಸುಹಾನ ಪ್ರಾರ್ಥನೆಗೈದು, ಜ್ಯೋತಿ ಶಿಕ್ಷಕರು ಸ್ವಾಗತಿಸಿದರು, ಶಿಕ್ಷಕಿ ಕುಮಾರಿ ಹವ್ಯರವರು ವಂದಿಸಿದರು ಹಾಗೂ ಅತಿಥಿ ಶಿಕ್ಷಕ ಸುರೇಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here