







ಕಾವು; ಮಾಡನ್ನೂರು ಸ್ಥಳಿಯ ಮದ್ರಸ ಹಾಗೂ ಮತ ಬೌತಿಕ ನಮನ್ವಯ ಶಿಕ್ಷಣ ಸಂಸ್ಥೆ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ವತಿಯಿಂದ ಎಪ್ಪತ್ತೇಳನೇ ಗಣರಾಜ್ಯೋತ್ಸವ ಆಚರಿಸಲಾಯಿತು.



ಜಮಾತ್ ಅಧ್ಯಕ್ಷ ಯೂಸುಫ್ ಹಾಜಿ ದ್ವಜಾರೋಹಣಗೈದರು. ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಖತೀಬ್ ಎಸ್ ಬಿ ದಾರಿಮಿ ಸಂವಿಧಾನ ಪ್ರಜೆಗಳಿಗೆ ನೀಡಿದ ಹಕ್ಕುಗಳು ಮತ್ತು ಪ್ರಜೆಗಳ ಜವಾಬ್ದಾರಿಯನ್ನು ನೆನಪಿಸಿದರು. ಪ್ರಾನ್ಸುಪಾಲರಾದ ಹನೀಫ್ ಹುದವಿ ಮುಖ್ಯ ಭಾಷಣ ಗೈದರು. ಬುರ್ಹಾನ್ ತಂಙಳ್ ದುಹಾಗೈದರು.



ಜಮಾತ್ ಕಾರ್ಯದರ್ಶಿ ಬಿ ಎಂ ಅಬ್ದುಲ್ಲಾ ,ಹಿರಾ ಸಿದ್ದೀಖ್ ಹಾಜಿ,ಶರೀಫ್,ಝುಬೈರ್ ಮತ್ತಿತರ ಗಣ್ಯರು ಮದ್ರಸ ಹಾಗೂ ಶಿಕ್ಷಣ ಸಂಸ್ಥೆಯ ಗುರುಗಳು ಭಾಗವಹಿಸಿದ್ದರು.
ಸದರ್ ಉಸ್ತಾದ್ ಅಬೂಬಕರ್ ಪೈಝಿ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದ ಭಾಗವಾಗಿ ಸಂಸ್ಥೆಯಲ್ಲಿ ನಡೆದ ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.










