ವಿವೇಕಾನಂದ ಪಾಲಿಟೆಕ್ನಿಕ್‌ನಲಿ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ

0

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ ವಿಹಂಗಮ- ಸ್ಮೃತಿ ಸಂಗಮ-2026 ದೀಪ ಪ್ರಜ್ವವನೆಯ ಮೂಲಕ ಉದ್ಘಾಟಿಸಲಾಯಿತು. ಹಿರಿಯ ವಿದ್ಯಾರ್ಥಿ ಪ್ರಸನ್ನ ದರ್ಬೆ ಮಾತನಾಡಿ, ವಿವೇಕಾನಂದಕ್ಕೆ ಒಂದು ವಿಶಿಷ್ಠ ಮನ್ನಣೆ ಇದೆ. ಉದ್ಯೋಗ ನೀಡುವ ಸಂದರ್ಭದಲ್ಲಿ ನಾವು ನಮ್ಮ ಮೊದಲ ಪ್ರಾಶಸ್ತ್ಯವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಿ ನಾವೇಲ್ಲರೂ ಕಾಲೇಜಿಗೆ ಅಳಿಲು ಸೇವೆ ಸಲ್ಲಿಸೊಣ ಎಂದರು. ಸಂಸ್ಥೆಯ ಸಂಚಾಲಕ ಮಹಾದೇವ ಶಾಸ್ತ್ರಿ ಮಣಿಲ ಮಾತನಾಡಿ, ವಿವೇಕಾನಂದ ಪಾಲಿಟೆಕ್ನಿಕ್‌ನ ಹಿರಿಮೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರಾ ಸಹಕಾರ ಅಗತ್ಯ ಈ ನಿಟ್ಟಿನಲ್ಲಿ ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಳ್ಳಿ ಎಂದು ಶುಭ ಹಾರೈಸಿದರು.


ವಿವೇಕಾನಂದ ಪಾಲಿಟೆಕ್ನಿಕ್‌ನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ ಅರುಣ್ ಕುಮಾರ್ ಮಾತನಾಡಿ, ಕ್ರೀಡೆ ನಮಗೆ ಶಾರೀರಿಕ ಆರೋಗ್ಯವನ್ನು ನೀಡುತ್ತದೆ. ನಾವೇಲ್ಲರೂ ಸಮಾಜಮುಖಿ ಕೆಲಸಕ್ಕೆ ಸಹಕರಿಸೋಣ ಎಂದು ನುಡಿದರು. ಕಾರ‍್ಯಕ್ರಮದ ಅಧ್ಯಕ್ಷರಾದ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಮಾತನಾಡುತ್ತ ಕಾಲೇಜಿಗೆ ಶಕ್ತಿಯನ್ನು ತುಂಬಿಸುವ ಕಾರ‍್ಯಕ್ರಮದಲ್ಲಿ ನೀವೇಲ್ಲರೂ ಕೈಜೋಡಿಸಿ ಕಲಿತ ಕಾಲೇಜಿಗೆ ಸಹಕಾರವನ್ನು ನೀಡಿ ಎಂದು ನುಡಿದರು.


ಈ ಕಾರ‍್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ರವಿ ಮುಂಗ್ಲಿಮನೆ, ಉಷಾ ಮುಳಿಯ, ಈಶ್ವರ ಚಂದ್ರ ಭಾಗವಹಿಸಿದರು. ಹಾಗೆಯೇ ಕಾಲೇಜಿನ ನಿವೃತ್ತ ಉಪನ್ಯಾಸಕ ವೆಂಕಟೇಶ್ ಭಟ್ ಹಿರಿಯ ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದ್ಧಿ ವರ್ಗದವರು ಉಪಸ್ಥಿತರಿದ್ದರು. ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಕಾಲೇಜಿನ ಪ್ರಾಂಶುಪಾಲ ಮುರಲೀಧರ್. ಯಸ್ ನೆರವೇರಿಸಿದರು. ಹಿರಿಯ ವಿದ್ಯಾರ್ಥಿನಿ ಹಾಗೂ ಉಪನ್ಯಾಸಕಿ ಜಯಲಕ್ಷ್ಮಿ ಪ್ರಾರ್ಥಿಸಿದರು. ಸಹನಾ ವಿಜ್ಞಾನ ವಿಭಾಗದ ಉಪನ್ಯಾಸಕರು ಧನ್ಯವಾದ ನೆರವೇರುಸುದರು. ಆಟೋಮೊಬೈಲ್ ವಿಭಾಗದ ಉಪನ್ಯಾಸಕ ಗುರುರಾಜ್.ಪಿ ಹಾಗೂ ಹಿರಿಯ ವಿದ್ಯಾರ್ಥಿನಿ ಪ್ರಯೋಗಾಲಯ ಸಹಾಯಕಿ ಅಂಕಿತ ಕಾರ‍್ಯಕ್ರಮ ನಿರೂಪಿಸಿದರು.


ಸಭಾ-ಕಾರ‍್ಯಕ್ರಮದ ನಂತರ ಹಿರಿಯ ವಿದ್ಯಾರ್ಥಿಗಳಿಗೆ ಕ್ರಿಕೆಟ್,ಲಗೋರಿ,ಹಗ್ಗಜಗ್ಗಾಟ ಹಾಗೂ ಫನ್ ಗೇಮ್ಸ್ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಯಿತು. ಈ ಕಾರ‍್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಹಾಗೂ ಆಟೋಮೊಬೈಲ್ ವಿಭಾಗದ ಉಪನ್ಯಾಸಕರಾದ ವಿನ್ಯಾಸ್ ಪುಂಡಿಗದ್ದೆ ಇವರು ಆಯೋಜಿಸಿದರು.

LEAVE A REPLY

Please enter your comment!
Please enter your name here