






ಪುತ್ತೂರು: ಮುಖ್ಯರಸ್ತೆಯಲ್ಲಿರುವ ಎಂ.ಸಂಜೀವ ಶೆಟ್ಟಿ ಜವುಳಿ ಮಳಿಗೆ ಮುಂಭಾಗದಲ್ಲಿ ಸಂಭವಿಸಿದ ಹಿಟ್ ಆಂಡ್ ರನ್ ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗ ಗಾಯಗೊಂಡ ಘಟನೆ ಜ.28 ರಂದು ತಡರಾತ್ರಿ ನಡೆದಿದೆ.


ಅತಿಯಾದ ವೇಗದಿಂದ ಬಂದ ಕಾರು ರಾಂಗ್ ಸೈಡ್ನಲ್ಲಿ ಬಂದು ಸಂಜೀವಶೆಟ್ಟಿ ಮುಂಭಾಗದಲ್ಲಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಸ್ಥಳೀಯರು ಕಿರುಚಾಡಿ ನಿಲ್ಲಿಸಲು ಯತ್ನಿಸಿದರೂ ಕಾರು ನಿಲ್ಲಿಸದೆ ಕಾರು ಸಹಿತ ಚಾಲಕ ಪರಾರಿಯಾಗಿದ್ದಾನೆ.



ಘಟನೆಯಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವೇಗಕ್ಕೆ ಬೈಕ್ನ ಹ್ಯಾಂಡಲ್ ತುಂಡಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸರು, ಪರಿಶೀಲನೆ ನಡೆಸಿ ತನಿಖೆ ಪ್ರಾರಂಭಿಸಿದ್ದಾರೆ.










