







ಕಡಬ: ಕಡಬದಲ್ಲಿ ಪ್ರಪ್ರಥಮ ಬಾರಿಗೆ ಟೀಮ್ ಅಧೀರ ಕಡಬ ಇದರ ವತಿಯಿಂದ ಪ್ರಥಮ ವರ್ಷದ ಅಧೀರ ನೈಟ್ಸ್ 2026 ಫೆ.28ರಂದು ಸಂಜೆ ಜೈನ್ ಲೇಔಟ್ ಹಳೆಸ್ಟೇಷನ್‌ನಲ್ಲಿ ನಡೆಯಲಿದೆ.


ಕಾರ್ಯಕ್ರಮದಲ್ಲಿ ವೈವಿಧ್ಯಮಯ ನೃತ್ಯ ಸಂಭ್ರಮ ಹಾಗೂ ಮ್ಯೂಸಿಕಲ್ ನೈಟ್ಸ್ ನಡೆಯಲಿದೆ. ಈ ಸಂಭ್ರಮ ವಿಶೇಷ ತಾರಾ ಮೆರಗು ಪಡೆಯಲಿದ್ದು, ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ಹಾಡು, ನೃತ್ಯದೊಂದಿಗೆ ನಡೆಯಲಿದೆ. ಕಡಬದಲ್ಲಿ ಪ್ರಥಮ ಬಾರಿಗೆ ಇಂತದೊಂದು ವಿಶೇಷ ಕಾರ್ಯಕ್ರಮ ನಡೆಯಲಿದ್ದು ಕಲಾಪ್ರಿಯರಿಗೆ ವಿಶೇಷ ರಸದೌತನ ಸಿಗಲಿದೆ.



ಅಧೀರ ಟೀಮ್ ಕಡಬದಿಂದ ಸಾಮಾಜಿಕ ಕಾರ್ಯ
ಕಳೆದ ಒಂದು ವರ್ಷದಿಂದ ಕಾರ್ಯಾಚರಿಸುತ್ತಿರುವ ಅಧೀರ ಟೀಮ್ ಕಡಬದಿಂದ ವಿಶೇಷವಾಗಿ ಅನಾರೋಗ್ಯ ಪೀಡಿತರಿಗೆ ಮತ್ತು ಆಶಕ್ತರಿಗೆ ಧನ ಸಹಾಯ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ ಹಲವಾರು ಮಂದಿಗೆ ಧನ ಸಹಾಯ ಮಾಡಲಾಗಿದೆ. ಇತ್ತೀಚೆಗೆ ರಕ್ತದಾನ ಶಿಬಿರವನ್ನು ಕೂಡ ಯಶಸ್ವಿಯಾಗಿ ನಡೆಸಲಾಗಿತ್ತು.










