ರಾಜೀವ್‌ಗಾಂಧಿ ಜ್ಯೋತಿ ಯಾತ್ರಾ ಸಮಿತಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ಸಿದ್ದಿಕ್ ಸೂರ್ಯ ನೇಮಕ

0

ಪುತ್ತೂರು: ರಾಜೀವ್‌ಗಾಂಧಿ ಜ್ಯೋತಿ ಯಾತ್ರಾ ಸಮಿತಿ ಇದರ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ ಸೂರ್ಯ ನಿವಾಸಿ , ಸಾಮಾಜಿಕ ಕಾರ್ಯಕರ್ತ ಸಿದ್ದಿಕ್ ಸೂರ್ಯ ಅವರನ್ನು ನೇಮಕ ಮಾಡಿ ರಾಜೀವ ಗಾಂಧಿ ಜ್ಯೋತಿಯಾತ್ರಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ದೊರೈವೇಲು ರವರು ನೇಮಕಾತಿ ಆದೇಶ ಹೊರಡಿಸಿದ್ದಾರೆ.


ಕಾಂಗ್ರೆಸ್ ಪಕ್ಷ ಹಾಗೂ ಮಾಜಿ ಪ್ರಧಾನಿ ದಿ ರಾಜೀವ ಗಾಂಧಿಯವರ ಬಗ್ಗೆ ದೇಶಾದ್ಯಂತ ಯುವಜನತೆ ಹಾಗೂ ವಿದ್ಯಾರ್ಥಿ ಸಮೂಹ ಹಾಗು ಸಾರ್ವಜನಿಕರಲ್ಲಿ ಮಾಹಿತಿ ನೀಡುವ ಈ ಪ್ರಚಾರ ಯಾತ್ರೆಯು ಪ್ರತೀ ವರ್ಷಕ್ಕೊಮ್ಮೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಂಚರಿಸುತ್ತದೆ. ಕೆಪಿಸಿಸಿ ಅಧೀನದಲ್ಲಿ ಒಳಪಡುವ ಈ ಸಮಿತಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಆರ್ ದೊರೈವೇಲು ಚೆಯರ್‌ಮೆನ್ ಆಗಿರುತ್ತಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರ ಶಿಫಾರಸ್ಸಿನಂತೆ ಈ ನೇಮಕಾತಿ ನಡೆದಿದೆ.


ಸಿದ್ದಿಕ್ ಸೂರ್ಯ ರವರು ಅಲ್‌ಅಮೀನ್ ಚಾರಿಟಿಗ್ರೂಪ್ ದಕ್ಷಿನಕನ್ನಡ ಇದರ ಆಡಳಿತ ನಿರ್ದೇಶಕರಾಗಿ, ಪುತ್ತೂರು ಮಿಲಾದ್ ಸಮಿತಿ ಉಪಾಧ್ಯಕ್ಷರಾಗಿ ಹಾಗೂ ಮುಸ್ಲಿಂ ಯುವಜನ ಪರಿಷತ್ ಇದರ ಸದಸ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಪ್ರತೀ ವರ್ಷ ಬೃಹತ್ ಆರೋಗ್ಯ ಶಿಬಿರವನ್ನು ಮಾಡುತ್ತಿದ್ದು ಸಾವಿರಾರು ಮಂದಿಗೆ ಉಚಿತ ಚಿಕಿತ್ಸಾ ನೆರವನ್ನು ನೀಡುತ್ತಿದ್ದಾರೆ. ಸರಕಾರಿ ಶಾಲೆಗಳಿಗೆ ಪೀಠೋಪಕರಣ ಹಾಗೂ ವಿದ್ಯುತ್ ಉಪಕರಣಗಳನ್ನು ನೀಡುವ ಮೂಲಕ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಕ್ಕೂ ನೆರವು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here