







ಕಟೀಲು : ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯ ಮುಂಭಾಗದಲ್ಲಿರುವ ಕಲಾಮಂಟಪದಲ್ಲಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಪುತ್ತೂರು ಇವರ ವೈಷ್ಣವೀ ನಾಟ್ಯಾಲಯದ ಶಿಷ್ಯವೃಂದದಿಂದ ನೃತ್ಯಾರ್ಪಣಂ ಶಾಸ್ತ್ರೀಯ ನೃತ್ಯ ಸೇವೆ ಸಮರ್ಪಣೆಗೊಂಡಿತು. ಕಟೀಲಿನಲ್ಲಿ ಕಳೆದ ಬಾರಿ ನಡೆದ ಬ್ರಹ್ಮಕಲಶೋತ್ಸವ ದಿನ ಆಚರಣೆಯ ಪ್ರಯುಕ್ತ ಶುಕ್ರವಾರ ನಡೆದ ಈ ನೃತ್ಯ ಕಾರ್ಯಕ್ರಮದಲ್ಲಿ ವಿದುಷಿ ಹರ್ಷಿತ ಬದಿಯಡ್ಕ ವಿದುಷಿ ರೂಪ ವಿಷೇಶ್, ಕುಮಾರಿ ಭಾರ್ಗವಿ, ಕುಮಾರಿ ಶಮಾ ವಳಕುಂಜ ನೃತ್ಯಸೇವೆ ಸಲ್ಲಿಸಿ ಕೃತಾರ್ಥರಾದರು.












