






ವಿದ್ಯಾರ್ಥಿಗಳಲ್ಲಿ ಮೆಟ್ರಿಕ್ ಮೇಳ ವ್ಯವಹಾರ ಜ್ಞಾನ ಬೆಳೆಸುವಲ್ಲಿ ಉತ್ತಮ ವೇದಿಕೆಯಾಗಿದೆ -ಸಿ.ಆರ್.ಪಿ ದೇವಪ್ಪ
ಮಕ್ಕಳಲ್ಲಿ ಉತ್ಸಾಹದ ಜೊತೆಗೆ ವ್ಯವಹಾರ ಜ್ಞಾನ ಬೆಳೆಸುವಲ್ಲಿ ಮೇಳ ಸಹಕಾರಿಯಾಗಿದೆ -ರವಿರಾಜ ರೈ


ಪುತ್ತೂರು: ಸ.ಹಿ.ಪ್ರಾ ಶಾಲೆ ಸಜಂಕಾಡಿಯಲ್ಲಿ ವಿದ್ಯಾರ್ಥಿಗಳಿಗೆ ವ್ಯವಹಾರ ಜ್ಞಾನ ಬೆಳೆಸುವ ಸಲುವಾಗಿ ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದ ವ್ಯಾಪಾರ ಮಳಿಗೆಗಳನ್ನು ಉದ್ಘಾಟಿಸಿದ ಕುಂಬ್ರ ಸಮೂಹ ಸಂಪನ್ಮೂಲ ವ್ಯಕ್ತಿ ದೇವಪ್ಪ ಇಂತಹ ಮೆಟ್ರಿಕ್ ಮೇಳಗಳು ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸುವಲ್ಲಿ ಉತ್ತಮ ವೇದಿಕೆಯಾಗಿದೆ ಎಂದರು.




ಮೆಟ್ರಿಕ್ ಮೇಳದ ಫಲಕ ಅನಾವರಣಗೊಳಿಸಿದ ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ರವಿರಾಜ್ ರೈ ಮಾತನಾಡಿ ಮಕ್ಕಳಲ್ಲಿ ಉತ್ಸಾಹದ ಜೊತೆಗೆ ವ್ಯವಹಾರ ಜ್ಞಾನ ಬೆಳೆಸುವಲ್ಲಿ ಈ ಮೇಳ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಎಸ್ .ಡಿ.ಎಂ.ಸಿ ಅಧ್ಯಕ್ಷೆ ಯಶೋಧ, ಉಪಾಧ್ಯಕ್ಷ ಇಬ್ರಾಹಿಂ ಸೇರಿದಂತೆ ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ಸ್ವಾಗತಿಸಿ, ವಂದಿಸಿದರು. ಪದವೀಧರ ಶಿಕ್ಷಕ ಗಣೇಶ ನಾಯಕ್ ಪುತ್ತೂರು, ಅತಿಥಿ ಶಿಕ್ಷಕಿ ಆಯಿಷತ್ ಮಿಸ್ರಿಯ ಸಹಕರಿಸಿದರು.










