ಬಳಂತಿಮೊಗರು ಶ್ರೀ ಮಲರಾಯ, ಮಹಿಷಂದಾಯ, ಧೂಮಾವತಿ ಪರಿವಾರ ದೈವಸ್ಥಾನದಲ್ಲಿ ಪರಿವಾರ ದೈವಗಳಿಗೆ ವರ್ಷಾವಧಿ ನೇಮೋತ್ಸವ

0

ಪುಣಚ: ಬಳಂತಿಮೊಗರು ಶ್ರೀ ಮಲರಾಯ, ಮಹಿಷಂದಾಯ, ಧೂಮಾವತಿ, ಪಂಜುರ್ಲಿ, ಕಲ್ಲುರ್ಟಿ-ಕಲ್ಕುಡ, ನೆತ್ತರ್‌ಕಣ್ ಮತ್ತು ಪರಿವಾರ ದೈವಸ್ಥಾನದಲ್ಲಿ ಶ್ರೀ ಧೂಮಾವತಿ, ಪಂಜುರ್ಲಿ, ಶ್ರೀ ಧೂಮಾವತಿ, ಕಲ್ಕುಡ-ಕಲ್ಲುರ್ಟಿ, ಗುಳಿಗ ಹಾಗೂ ಪರಿವಾರ ದೈವಗಳಿಗೆ ವರ್ಷಾವಧಿ ನೇಮೋತ್ಸವವು ಜ.30 ಮತ್ತು ಜ.31ರಂದು ನಡೆಯಿತು.

ಜ.23ರಂದು ಗೊನೆ ಮುಹೂರ್ತ ನಡೆದಿದ್ದು, ಜ.30ರ ಬೆಳಗ್ಗೆ ಗಂಟೆ 6-00ರಿಂದ ಗಣಪತಿ ಹೋಮ, ನಾಗ ತಂಬಿಲ, ಹರಿಸೇವೆ ಹಾಗೂ ಸಂಜೆ ಗಂಟೆ 5-00ಕ್ಕೆ ಶ್ರೀ ಮಲರಾಯ, ಮಹಿಷಂದಾಯ, ಧೂಮಾವತಿ, ಪಂಜುರ್ಲಿ, ರಕ್ತೇಶ್ವರಿ, ಗುಳಿಗ, ಕಲ್ಲುರ್ಟಿ-ಕಲ್ಕುಡ ಹಾಗೂ ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಸಂಜೆ ಗಂಟೆ 6-00ಕ್ಕೆ ಶ್ರೀ ಧೂಮಾವತಿ ದೈವದ ಹಾಗೂ ಪಂಜುರ್ಲಿ ದೈವದ ಭಂಡಾರ ತೆಗೆದು, ರಾತ್ರಿ 7-00ರಿಂದ ಪುದಕೋಲ, 8-00ಕ್ಕೆ ಗೊಂದೋಳು ಪೂಜೆ, 9-30ಕ್ಕೆ ಗುಳಿಗ ದೈವದ ನೇಮ ಹಾಗೂ ಪಂಜುರ್ಲಿ, ಧೂಮಾವತಿ, ಕಲ್ಲುರ್ಟಿ-ಕಲ್ಕುಡ ದೈವದ ನೇಮ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್‌ ಕುಮಾರ್ ಪುತ್ತಿಲ, ಅಕ್ಷಯ ಕಾಲೇಜಿನ ಚೇಯರ್‌ ಮನ್‌ ಜಯಂತ್‌ ನಡುಬೈಲು ಹಾಗೂ ಹಲವು ಗಣ್ಯರು, ಭಕ್ತಾಧಿಗಳು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here