ಪೆರ್ಲಂಪಾಡಿ: ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾರಿ ಫೋಲ್ಡಿಂಗ್, ಸಾರಿಗೊಂಡೆ ತರಬೇತಿ ಕಾರ್ಯಕ್ರಮ ಉದ್ಘಾಟನೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್, ಧರ್ಮಸ್ಥಳ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಇದರ ಜಂಟಿ ಆಶ್ರಯದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಯಡಿ ಯೋಜನೆ ಪಾಲುದಾರ ಬಂಧುಗಳಿಗೆ ಉಚಿತವಾಗಿ 5 ದಿನಗಳ ಸಾರಿ ಫೋಲ್ಡಿಂಗ್ ಹಾಗೂ ಸಾರಿಗೊಂಡೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಕೊಳ್ತಿಗೆ ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕೊಳ್ತಿಗೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ತೀರ್ಥಾನಂದ ದುಗ್ಗಳರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರನ್ನು ಸ್ವಾವಲಂಬಿಯಾಗಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಯೋಜನೆಯ ತಂದಂತಹ ಈ ಕಾರ್ಯಕ್ರಮವು ಬಹಳ ವಿಶೇಷವಾದದ್ದು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದು ಮಹಿಳೆಯರು ಸದೃಢರಾಗಬೇಕೆಂದು ಶುಭ ಹಾರೈಸಿದರು.

ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕರವರು ಮಾತನಾಡುತ್ತ ಯೋಜನೆಯಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮವು ಸಮಾಜಕ್ಕೆ ಪೂರಕವಾಗಿರುವಂತಹದ್ದು ಉದ್ಯೋಗವು ಒಂದು ಕುಟುಂಬದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾದದ್ದು ಮಹಿಳೆಯರು ಸಹ ಉದ್ಯೋಗವನ್ನು ಮಾಡಿ ಕುಟುಂಬಕ್ಕೆ ಬಲವನ್ನು ತರುವಂತೆ ಕೆಲಸವನ್ನು ಮಾಡುತ್ತಿದ್ದಾರೆ ಸಿಕ್ಕಂತಹ ಈ ಅವಕಾಶವನ್ನು ಪ್ರಾಮಾಣಿಕವಾಗಿ ಬಳಸಿ ಸ್ವಾವಲಂಬಿಯಾಗಿ ಬದುಕಿ ಎಂದು ಶುಭ ಹಾರೈಸಿದರು.

ಸಿಆರ್‌ಇ ತರಬೇತಿ ಸಂಸ್ಥೆ ಬೆಳ್ತಂಗಡಿ ಇಲ್ಲಿನ ಉಪನ್ಯಾಸಕಿ ಧರಣಿಯವರು ಮಾತನಾಡುತ್ತಾ ಉದ್ಯೋಗಂ ಮಾನವ ಲಕ್ಷಣಂ ಎಂಬಂತೆ ಖಾವಂದರ ಹಾಗೂ ಮಾತ್ರ ಶ್ರೀ ಅಮ್ಮನವರ ಮೂಲ ಪರಿಕಲ್ಪನೆಯಿಂದ ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಹಲವಾರು ಉದ್ಯೋಗ ತರಬೇತಿಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ . ಅದರಂತೆ ಈ ತರಬೇತಿಯಲ್ಲಿ ತರಬೇತಿ ಪಡೆಯುವ ಫಲಾನುಭವಿ ಮುಂದೆ ಸ್ವಉದ್ಯೋಗವನ್ನು ಮಾಡಿ ಇತರ ಮಹಿಳೆಯರಿಗೂ ತರಬೇತಿ ನೀಡುವಂತಾಗಬೇಕು ಎಂದು ಹೇಳಿ ಶುಭ ಹಾರೈಸಿದರು. ಕೆದಂಬಾಡಿ ವಲಯದ ಜನಜಾಗೃತಿ ವಲಯಾಧ್ಯಕ್ಷ ಶ್ಯಾಮ್ ಸುಂದರ್ ರೈ ಮಾತನಾಡಿ, ಮಹಿಳೆಯರು ಮನೆಯ ಒಳಗೆ ಮಾತ್ರವಲ್ಲದೆ ಆರ್ಥಿಕವಾಗಿ ಸಬಲರಾಗಲು ಈ ಕಾರ್ಯಕ್ರಮವು ಬಹಳ ಮಹತ್ವಪೂರ್ಣವಾಗಿದೆ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಶಶಿಧರ ಎಂ, ಕೇಂದ್ರ ಒಕ್ಕೂಟಗಳ ಅಧ್ಯಕ್ಷ ಉದಯಕುಮಾರ್, ನವೋದಯ ಸಂಘಗಳ ಅಧ್ಯಕ್ಷ ಅಶೋಕ್, ಕೆದಂಬಾಡಿ ವಲಯದ ಮೇಲ್ವಿಚಾರಕಿ ಶುಭವತಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ,ಅಂಗನವಾಡಿ ಶಿಕ್ಷಕಿ ಪೂರ್ಣಿಮಾ, ತರಬೇತಿ ನೀಡುವ ಶಿಕ್ಷಕಿ ದಿವ್ಯಶ್ರೀ, ಸೇವಾ ಪ್ರತಿನಿಧಿಗಳಾದ ಶಾರದ ಮತ್ತು ಅರುಣ, ತರಬೇತಿ ಪಡೆಯುವ ಸದಸ್ಯರು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here