






ಪುತ್ತೂರು: ಜಿ.ಎಲ್. ಆಚಾರ್ಯ ಜುವೆಲರ್ಸ್ ವತಿಯಿಂದ ಆಯೋಜಿಸಲಾದ 5ನೇ ವರ್ಷದ ಜಿ.ಎಲ್ ಟ್ರೋಫಿ 2026 ಸೀಝನ್ – 5 ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ಹಾಗೂ ಸನ್ಮಾನ ಕಾರ್ಯಕ್ರಮವು ಕೊಂಬೆಟ್ಟು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಲರಾಮ್ ಆಚಾರ್ಯ ಅವರು ವಹಿಸಿಕೊಂಡು ಮಾತನಾಡಿ, ಕ್ರೀಡಾಪಟುಗಳು ಕ್ರೀಡಾ ಸೌಹಾರ್ದತೆಯನ್ನು ಕಾಪಾಡಿಕೊಂಡು ಸ್ನೇಹಪೂರ್ಣವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.




ಈ ಸಂದರ್ಭದಲ್ಲಿ ಜಿ.ಎಲ್. ಆಚಾರ್ಯ ಜುವೆಲರ್ಸ್ ಸಂಸ್ಥೆಯ ಹಿರಿಯ ಸಿಬ್ಬಂದಿಯಾದ ಶಂಕರ್ ಮೋಹನ್ ಸಾಲೆ ಅವರು 1967ರಲ್ಲಿ ಜಿ.ಎಲ್. ಆಚಾರ್ಯ ಜುವೆಲರ್ಸ್ ಸಂಸ್ಥೆಗೆ ಸೇರ್ಪಡೆಗೊಂಡು, ಸಂಸ್ಥೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದು, ಅವರು ಸಲ್ಲಿಸಿದ ಅಪಾರ ಸೇವೆ, ಸತ್ಯನಿಷ್ಠ ವ್ಯಾಪಾರ, ಸಮಾಜಮುಖಿ ಚಿಂತನೆ ಹಾಗೂ ಧಾರ್ಮಿಕ ಸೇವೆಗಳ ಮೂಲಕ ಜನಮಾನಸದಲ್ಲಿ ವಿಶಿಷ್ಟ ಗೌರವ ಪಡೆದಿದ್ದಾರೆ,ಎಂದು ನಿರಂತ್ ದೇವಸ್ಯ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಶಂಕರ್ ಮೋಹನ್ ಸಾಲೆ ಅವರನ್ನು ಬಲರಾಮ್ ಆಚಾರ್ಯ, ಸುದನ್ವ ಬಿ ಆಚಾರ್ಯ ಅವರು ಸನ್ಮಾನಿಸಿ ಗೌರವಿಸಿದರು.

ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಹಾಗೂ ಕ್ರೀಡಾ ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪ್ರಥಮ ಸ್ಥಾನವನ್ನು ಜಿ.ಎಲ್ ಹಾಸನ, ದ್ವೀತಿಯ ಸ್ಥಾನವನ್ನು ಜಿ.ಎಲ್ ಕುಶಾಲನಗರ, ತೃತೀಯ ಸ್ಥಾನವನ್ನು ಜಿ.ಎಲ್ ಪುತ್ತೂರು (ಪ್ರಾಚೀ)ಅವರು ಪಡೆದುಕೊಂಡರು. ಸರಣಿ ಶ್ರೇಷ್ಠ ಹಾಗೂ ಫೈನಲ್ ಪಂದ್ಯ ಶ್ರೇಷ್ಠ ಆಟಗಾರನಾಗಿ ಜೇಮ್ಸ್ (ಹಾಸನ), ಉತ್ತಮ ದಾಂಡಿಗನಾಗಿ ವಿನಯ್ ಕೆ.ಪಿ (ಸುಳ್ಯ), ಉತ್ತಮ ಎಸೆತಗಾರನಾಗಿ ಹರೀಶ್ (ಹಾಸನ), ಉತ್ತಮ ಕ್ಷೇತ್ರರಕ್ಷಕರಾಗಿ ವಿಜಿತ್ ಕೃಷ್ಣ, ಗೇಮ್ ಚೆಂಜರಾಗಿ ಚೇತನ್ (ಕುಶಾಲನಗರ) ಇವರು ಪ್ರಶಸ್ತಿಯನ್ನು ಪಡೆದುಕೊಂಡರು. ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಜಿ.ಎಲ್ ಪುತ್ತೂರು (ಪ್ರಾಚೀ), ದ್ವಿತೀಯ ಸ್ಥಾನವನ್ನು ಜಿ.ಎಲ್ ಪುತ್ತೂರು (ಗ್ಲೋ) ಅವರು ಪಡೆದುಕೊಂಡರು.

ಜಿ.ಎಲ್ ಆಚಾರ್ಯ ಜುವೆಲರ್ಸ್ ವತಿಯಿಂದ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಲಕ್ಷ್ಮೀಕಾಂತ್ ಬಿ ಆಚಾರ್ಯ ಅವರು ದೀಪ ಬೆಳಗಿಸುವ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಹಾಗೂ ವೇದ ಲಕ್ಷ್ಮೀಕಾಂತ್ ಬಿ ಆಚಾರ್ಯ, ಶ್ರೀರಾಮ್ ಆಚಾರ್ಯ ಮತ್ತು ಇತರರು ಉಪಸ್ಥಿತರಿದ್ದರು.










