






ಅಧ್ಯಕ್ಷ; ಅನೀಸ್ ನೂಜಿಲ, ಪ್ರಧಾನ ಕಾರ್ಯದರ್ಶಿ; ಸಿದ್ದೀಕ್ ಅಲ್‌ಅಮೀನ್, ಕೋಶಾಧಿಕಾರಿ; ಬಶೀರ್ ಮಶ್ರೀಕ್


ಕಡಬ: ಕುಂತೂರು ಬೇಲ್ಪಾಡಿ ಎ & ಬಿ ಜುಮಾ ಮಸೀದಿ ಆಡಳಿತ ಸಮಿತಿ ನೂತನ ಅಧ್ಯಕ್ಷರಾಗಿ ಅನೀಸ್ ನೂಜಿಲ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಅಲ್‌ಅಮೀನ್ ಹಾಗೂ ಕೋಶಾಧಿಕಾರಿಯಾಗಿ ಬಶೀರ್ ಮಶ್ರೀಕ್, ಜೊತೆ ಕಾರ್ಯದರ್ಶಿಗಳಾಗಿ ಫಯಾಝ್ ಝೆಡ್ ಬಿ., ಅಬ್ದುಲ್ಲಾ ಹಾಜಿ ಪಿ.ಎ., ಆಯ್ಕೆಗೊಂಡಿದ್ದಾರೆ.
ಜ.೨೯ರಂದು ಜಮಾಅತ್ ಮುದರ್ರಿಸ್ ಮೊಯಿದು ಫೈಝಿಯವರ ನೇತೃತ್ವದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ಅಯ್ಯೂಬ್ ಕೆ., ಸದಸ್ಯರಾಗಿ ಇಬ್ರಾಹಿಂ ಕಜೆ, ಹಸೈನಾರ್ ಹಾಜಿ ಚಾಲ್ಕರೆ, ಇಸ್ಮಾಯಿಲ್ ಅಲ್‌ಅಮೀನ್, ಅಬ್ದುಲ್ ರಹಿಮಾನ್ ಎರ್ಮಾಳ, ಮುಹಮ್ಮದ್ ಅಲಿ ಕೋಚಕಟ್ಟೆ, ಖಾದರ್ ಚಾಲ್ಕರೆ, ಅಶ್ರಫ್ ಸುರುಳಿ, ಪುತ್ತುಮೋನು ಎಸ್.ಕೆ., ಖಾದರ್ ಪೊಸಳಿಗೆ, ಅಸೀಫ್ ಎಂ.ಕೆ., ಝಬೈರ್ ಬೇಲ್ಪಾಡಿ, ಅಬ್ದುಲ್ ರಝಾ ಕ್ ಎ.ಕೆ., ಅಶ್ರಪ್ ಬದ್ರಿಯಾ ಚಿಕನ್, ಉಸ್ಮಾನ್ ಬುಡಾರ, ಪುತ್ತುಮೋನು ಮುಡಿಪಿನಡ್ಕ, ಅಬ್ದುಲ್ಲಾ ಮುಡಿಪಿನಡ್ಕ, ಅಬ್ಬಾಸ್ ಕೋಚಕಟ್ಟೆ, ಹಮೀದ್ ಪಿ.ಎ., ಇಕ್ಬಾಲ್ ಎ.ಎಸ್., ಅಬೂಬಕ್ಕರ್ ಡಿ.ಎಸ್., ರಿಯಾಝ್ ಕೆಎಂಎಸ್, ಹಂಝ ಪಲ್ಲತ್ತಾರ್, ಅಶ್ರಫ್ ಅನ್ನಡ್ಕ ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿ ಯಾಕೂಬ್ ಕೆ., ಸ್ವಾಗತಿಸಿ, ವರದಿ ವಾಚಿಸಿದರು.













