ಎಸ್.ಡಿ.ಪಿ ಕಲೋಪಾಸನದಲ್ಲಿ ಚಿತ್ರ ನಟಿ ನವ್ಯಾ ನಾಯರ್ ಭರತನಾಟ್ಯ

0

ಮಕ್ಕಳಿಗೆ ಕನಿಷ್ಠ ಒಂದು ಕಲಾ ಪ್ರಕಾರ ಕಲಿಸಬೇಕು-ಕೇಶವ ಪ್ರಸಾದ್ ಮುಳಿಯ

ಪುತ್ತೂರು: ಪರ್ಲಡ್ಕ ಎಸ್.ಡಿ.ಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಆವರಣದಲ್ಲಿ ನಡೆಯುತ್ತಿರುವ 22ನೇ ವರ್ಷದ ಎಸ್.ಡಿ.ಪಿ ಕಲೋಪಾಸನಾ ಕಾರ್ಯಕ್ರಮದ ಎರಡನೇ ದಿನವಾದ ಫೆ.1ರಂದು ಖ್ಯಾತ ಮಲೆಯಾಳಂ ಚಿತ್ರ ನಟಿ ನವ್ಯ ನಾಯರ್ ಇವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.


ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿದೇಶಕ ಕೇಶವ ಪ್ರಸಾದ್ ಮುಳಿಯರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಧಾರ್ಮಿಕ ಶಿಕ್ಷಣ ಪಡೆಯಲು ಕಲೆಯೂ ಒಂದು ಮಾರ್ಗವಾಗಿದೆ. ಮಕ್ಕಳಿಗೆ ಕನಿಷ್ಠ ಒಂದು ಕಲಾ ಪ್ರಕಾರವನ್ನು ಕಲಿಸಬೇಕು. ದೇವರನ್ನು ಆರಾಧಿಸುವ ರೀತಿಯಲ್ಲಿ ಕಲೆಯನ್ನು ಉಪಾಸನೆ ಮಾಡುವ ಕಾರ್ಯ ಡಾ. ಹರಿಕೃಷ್ಣ ಪಾಣಾಜೆ ದಂಪತಿಯಿಂದ ನಡೆಯುತ್ತಿದ್ದು ವಿವಿಧ ಕಲಾ ಪ್ರಕರಣಗಳನ್ನು ಕಳೆದ 22 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಎಸ್.ಡಿ.ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ, ರೂಪಲೇಖ, ಮೇಘನಾ ಪಾಣಾಜೆ, ಡಾ. ಕೇದಾರಕೃಷ್ಣ ಪಾಣಾಜೆ, ಮನೇಕ್ ಕಿಶೋರ್, ಗೌರಿ ಜಿ. ಪಣಿಕ್ಕರ್, ಸುಜಾತ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಮಾಧವ ಭಟ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆ ಬಳಿಕ ಮಲೆಯಾಳಂ ಚಿತ್ರ ನಟಿ ನವ್ಯ ನಾಯರ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here