







ಬಡಗನ್ನೂರು: ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ ಸೇವಾ ಸಮಿತಿ ಮತ್ತು ಊರ ಹತ್ತು ಸಮಸ್ತರು, ಪಡುಮಲೆ ಇದರ ವತಿಯಿಂದ ಶ್ರೀ ಕಟೀಲು ಮರ್ಗಾಪರರ್ಮೇಶ್ವರಿ ಯಕ್ಷಗಾನ ಮೇಳದವರಿಂದ ಯಕ್ಷಗಾನ ಬಯಲಾಟ ಸೇವೆ ಫೆ.6ರಂದು ಶ್ರೀ ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಅಸ್ರಣ್ಣ ರವರ ಗೌರವಾಧ್ಯಕ್ಷತೆಯಲ್ಲಿ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಎದುರು ಗದ್ದೆಯಲ್ಲಿ ನಡೆಯಿತು.



ಫೆ.6ರಂದು ಸಂಜೆ ಗಂ 5.45ಕ್ಕೆ ಚೌಕಿ ಪೂಜೆ ಬಳಿಕ ಕುರುಕ್ಷೇತ್ರ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.



ಸನ್ಮಾನ ಕಾರ್ಯಕ್ರಮ
ಪಡುಮಲೆ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ ಸೇವಾ ಸಮಿತಿ ಗೌರವ ಸಲಹೆಗಾರರು, ಯಕ್ಷಗಾನ ಹಿರಿಯ ಕಲಾವಿದರೂ ಆದ ಕೆ. ಸಿ ಪಾಟಾಳಿ ಮತ್ತು ಕುಮುದಾಕ್ಷಿ ದಂಪತಿಗಳನ್ನು ಪಡುಮಲೆ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ ಸೇವಾ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು ಹಾಗೂ ಬಯಲಾಟ ಸಮಿತಿ ಅಧ್ಯಕ್ಷ ಉದಯ ಕುಮಾರ್ ಪಡುಮಲೆ ಶಾಲು, ಹಾರ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವ ಸನ್ಮಾನ ನೆರವೇರಿಸಿದರು.

ಗೌರವಾರ್ಪಣೆ
ಬಯಲಾಟ ಸಮಿತಿ ಗೌರವ ಸಲಹೆಗಾರರಾದ ರಾಮಣ್ಣ ಗೌಡ ಬಸವಹಿತ್ಲು, ಗಂಗಾಧರ ರೈ ಎಂ.ಜಿ, ಕೃಷ್ಣ ರೈ ಕುದ್ಕಾಡಿ, ಉಪಾಧ್ಯಕ್ಷರಾದ ಪುರಂದರ ರೈ ಕುದ್ಕಾಡಿ, ಜನಾರ್ದನ ಪೂಜಾರಿ ಪದಡ್ಕ, ಪ್ರಧಾನ ಕಾರ್ಯದರ್ಶಿ ಗಣೇಶ್ ಭಟ್ ಈಶಮೂಲೆ, ಜತೆ ಕಾರ್ಯದರ್ಶಿ ಸುರೇಶ್ ರೈ ಪಳ್ಳಾತ್ತಾರು, ಕೋಶಾಧಿಕಾರಿ ರವಿರಾಜ ರೈ ಸಜಂಕಾಡಿ, ಲೆಕ್ಕ ಪರಿಶೋದಕ ರಾಜೇಶ್ ಸುಳ್ಳಪದವು ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀನಿವಾಸ್ ಗೌಡ ಕನ್ನಯ, ಶಂಕರಿ ಪಟ್ಟೆ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಮಂಡಳಿ ಅಧ್ಯಕ್ಷ ರವಿಂದ್ರ ಚಿಲಿಂಬಿ, ಬಯಲಾಟ ಸಮಿತಿ ಸದಸ್ಯರಾದ ಕುಮಾರ ಅಂಬಟೆಮೂಲೆ, ನಾರಾಯಣ ಪೂಜಾರಿ ಮುಡಿಪಿನಡ್ಕ, ಅಪ್ಪಯ್ಯ ನಾಯ್ಕ ತಲೆಂಜಿ, ಸಂಜೀವ ಸಾಲಿಯಾನ್ ಅಣಿಲೆ, ರಮೇಶ್ ರೈ ಕೖೊಲ, ವಿಶ್ವನಾಥ ಪೂಜಾರಿ ಪೂಜಾರಿಮೂಲೆ, ಸುಧೀರ್ ನಾಯಕ್ ಇಂದಾಜೆ, ಕೃಷ್ಣಪ್ರಸಾದ್ ರೈ ಪಡುಮಲೆ, ಸುಂದರ ನಾಯ್ಕ ಕನ್ನಡ್ಕ, ತ್ಯಾಂಪಣ್ಣ ಸಿ. ಯಚ್ ಚನಿಯಮೂಲೆ, ಕಾಂತಪ್ಪ ಪೂಜಾರಿ ಮಡತನಮೂಲೆ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ವಾಣಿಶ್ರೀ ಪಡುಮಲೆ, ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ ಗಿರಿಮನೆ, ಶಾಸ್ತಾರ ಸ್ಫೋಟ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ಮೇಗಿನಮನೆ, ಹಾಗೂ ಕಲಾಭಿಮಾನಿಗಳು ಭಾಗವಹಿಸಿದ್ದರು.
ಸಾರ್ವಜನಿಕ ಅನ್ನಸಂತರ್ಪಣೆ
ಕಾರ್ಯಕ್ರಮದಲ್ಲಿ ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.










