







ಪುತ್ತೂರು: ಕರ್ನೂರು ನೆಟ್ಟಣಿಗೆ ಮುಡ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ವತಿಯಿಂದ ಶಾಲಾ ವಿದ್ಯಾರ್ಥಿಗಳ ಪ್ರಕೃತಿ ನಡಿಗೆ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರಾದ ಕರ್ನೂರು ಹಿತ್ಲು ಮೂಲೆ ಸತೀಶ್ ರೈ ಹಾಗೂ ಜಯಂತಿ ಇವರ “ಶಿಬಿರ” ಮನೆಗೆ ಕೈಗೊಂಡಿದ್ದರು. ಸತೀಶ್ ರೈಯವರ ಪುತ್ರ ಕರ್ನೂರು ಶಾಲೆಯ ಹಿರಿಯ ವಿದ್ಯಾರ್ಥಿ ಅನೂಪ್ ರೈ ಇವರು ಗೋಬರ್ ಗ್ಯಾಸ್ನ ಉಪಯೋಗ ಹಾಗೂ ತಯಾರಿಯ ಬಗ್ಗೆ ತಿಳಿಸಿಕೊಟ್ಟರು. ಪ್ರಮುಖ ಕೃಷಿಗಳಾದ
ಅಡಕೆ, ತೆಂಗು, ವೀಳ್ಯದೆಲೆ, ಮಾವು,ಹಲಸು,ಗೇರುಬೀಜ, ಬಾಳೆ, ಚಿಕ್ಕು,ಕರಿಮೆಣಸು, ದೀವಿ ಹಲಸು ಮುಂತಾದ ಕೃಷಿಗಳ ಆರೈಕೆ ಹಾಗೂ ಬೆಳವಣಿಗೆಯ ಆರೈಕೆ ಬಗ್ಗೆ ಸತೀಶ್ ರೈಯವರು ಮಾಹಿತಿನೀಡಿದರು. ಕೃಷಿ ತೋಟದಲ್ಲಿ ಓಡಾಡಿದ ವಿದ್ಯಾರ್ಥಿಗಳು ಕೃಷಿಯನ್ನು ಕಂಡು ಸಂಭ್ರಮಿಸಿದರು. ಬೆಳಗ್ಗೆಯ ಶರಬತ್ ಹಾಗೂ ತಿಂಡಿ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಶಾಲಾ ಎಸ್. ಡಿ.ಎಂ. ಸಿ, ಶಾಲಾ ಮುಖ್ಯ ಗುರುಗಳು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.



ಕೃಷಿ ತೋಟದಲ್ಲಿ ಸಂಭ್ರಮಿಸಿದ ವಿದ್ಯಾರ್ಥಿಗಳು
ಪ್ರಶಸ್ತಿ ಪುರಸ್ಕೃತ ಕೃಷಿಕರಾಗಿರುವ ಕರ್ನೂರು ಸತೀಶ್ ರೈಯವರ ಶಿಬಿರ ಕೃಷಿ ತೋಟದಲ್ಲಿ ವಿಶೇಷವಾಗಿ ಅಡಿಕೆ, ತೆಂಗು, ವೀಳ್ಯದೆಲೆ, ಮಾವು, ಹಲಸು, ಚಿಕ್ಕು, ಕರಿಮೆಣಸು ಇತ್ಯಾದಿಗಳಿದ್ದು ಇದಲ್ಲದೆ ವಿಶಾಲವಾದ ಗೇರು ತೋಟವಿದೆ. ಕೃಷಿ ತೋಟದುದ್ದಕ್ಕೂ ಓಡಾಡಿದ ವಿದ್ಯಾರ್ಥಿಗಳು ಕೃಷಿಯನ್ನು ಹಾಗೂ ಕೃಷಿ ಮಾಹಿತಿ ಪಡೆದುಕೊಂಡು ಸಂಭ್ರಮಿಸಿದರು. ಶಿಕ್ಷಕರು ಹಾಗೂ ಕೃಷಿಕರಾದ ಸತೀಶ್ ರೈಯವರು ವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ ನೀಡಿದರು.













