






ಪುತ್ತೂರು: ಸಂಸತ್ ಸದಸ್ಯೆ, ಸುಪ್ರೀಂ ಕೋರ್ಟ್ ವಕೀಲರಾದ ಬಾನ್ಸುರಿ ಸ್ವರಾಜ್ ಅವರು “ವಿಕಸಿತ ಭಾರತ” ಕುರಿತು ಪ್ರೇರಣಾತ್ಮಕ ಭಾಷಣ ಮಾಡಲು ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಭೇಟಿ ನೀಡಿದರು.



ಕ್ಯಾಂಪ್ಕೋ ನಿರ್ದೇಶಕ ನ್ಯಾಯವಾದಿ ಮುರಳಿ ಕೃಷ್ಣ ಕೆ.ಎನ್. ಬಾನ್ಸುರಿ ಸ್ವರಾಜ್ ಅವರಿಗೆ ಕ್ಯಾಂಪ್ಕೋ ಚಾಕೊಲೇಟ್ ನೀಡಿ ಶುಭಾಶಯ ಕೋರಿದರು. ಕ್ಯಾಂಪ್ಕೋ ಮತ್ತು ಅದರ ಚಟುವಟಿಕೆಗಳ ಕುರಿತು ವಿವರಿಸಿದರು. ಜೊತೆಗೆ ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆ (WHO) ವತಿಯಿಂದ ಪ್ರಸ್ತಾಪಿಸಲಾದ ಅಡಿಕೆ ಸೇವನೆಯ ನಿಯಂತ್ರಣ ಮಾರ್ಗಸೂಚಿಗಳಿಂದ ಅಡಿಕೆ ರೈತರು ಎದುರಿಸುತ್ತಿರುವ ವಿವಿಧ ಸವಾಲುಗಳ ಕುರಿತು ವಿವರಿಸಿದರು.



ಕ್ಯಾಂಪ್ಕೋ ನಿರ್ದೇಶಕ ಮುರಳಿ ಕೃಷ್ಣ ಅವರು WHO ಸಂಸ್ಥೆಯ ಉಪಕ್ರಮಗಳು ಮತ್ತು ಈ ಮಾರ್ಗಸೂಚಿಗಳು ಈ ಪ್ರದೇಶದ ಸಾವಿರಾರು ರೈತರ ಜೀವನೋಪಾಯದ ಮೇಲೆ ಬೀರುವ ಪರಿಣಾಮದ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಸಂಸತ್ ಸದಸ್ಯೆ ಬಾನ್ಸುರಿ ಸ್ವರಾಜ್ ಅವರು ಈ ವಿಷಯವನ್ನು ಸಂಸತ್ ನಲ್ಲಿ ಮತ್ತು ವಾಣಿಜ್ಯ ಮತ್ತು ಕೃಷಿ ಸಚಿವಾಲಯದಲ್ಲಿ ಸಂಸದ ಬ್ರಿಜೇಶ್ ಚೌಟ ಮತ್ತು ಇತರ ನಾಯಕರ ನೇತೃತ್ವದಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.










