ಸವಣೂರಿನಲ್ಲಿ ಲಕ್ಷ್ಮೀ ಜನರಲ್ ಸ್ಟೋರ್ ಉದ್ಘಾಟನೆ

0

ಪುತ್ತೂರು: ಸವಣೂರು ಪದ್ಮಾಂಬಾ ವಾಣಿಜ್ಯ ಸಂಕೀರ್ಣದಲ್ಲಿ ಲಕ್ಷ್ಮೀ ಜನರಲ್ ಸ್ಟೋರ್ ಫೆ. 7 ರಂದು ಶುಭಾರಂಭಗೊಂಡಿತು. ಅರಿಕ್ಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿರವರು ಮಾತನಾಡಿ, ಸವಣೂರು ಪರಿಸರದಲ್ಲಿ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೀರ್ತನ್ ಕೋಡಿಬೈಲು ಮತ್ತು ಸಂತೋಷ್ ಶೆಟ್ಟಿ ಕಲಾಯಿಯವರು ಪ್ರಾರಂಭ ಮಾಡಿರುವ ಲಕ್ಷ್ಮೀ ಜನರಲ್ ಸ್ಟೋರ್ ಯಶಸ್ವಿಯಾಗಿ ನಡೆಯಲಿ, ಉದ್ಯಮ ಕ್ಷೇತ್ರದಲ್ಲಿ ಈ ಯುವ ನಾಯಕರು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ ಎಂದು ಶುಭಹಾರೈಸಿದರು.
ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್‌ರವರು ಮಾತನಾಡಿ, ಯುವ ಮುಂದಾಳುಗಳಾದ ಕೀರ್ತನ್ ಕೋಡಿಬೈಲು ಮತ್ತು ಸಂತೋಷ್ ಶೆಟ್ಟಿ ಕಲಾಯಿರವರು ಪ್ರಾರಂಭ ಮಾಡಿರುವ ಈ ಮಳಿಗೆ ಯಶಸ್ವಿಯಾಗಿ ನಡೆಯಲಿ, ಮುಂದೆ ಇವರು ಜೊತೆಯಾಗಿ ಸೂಪರ್ ಮಾರ್ಕೆಟ್‌ನಂತಹ ಸಂಸ್ಥೆಯನ್ನು ಮಾಡುವ ಅವಕಾಶ ಒದಗಿ ಬರಲಿ ಎಂದು
ಶುಭಹಾರೈಸಿದರು.


ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಶುಭಹಾರೈಸಿದರು. ಸಂಸ್ಥೆಯ ಮಾಲಕರಾದ ಕೀರ್ತನ್ ಕೋಡಿಬೈಲು ಮತ್ತು ಸಂತೋಷ್ ಶೆಟ್ಟಿ ಕಲಾಯಿರವರುಗಳು ಅತಿಥಿಗಳನ್ನು ಸ್ವಾಗತಿಸಿದರು, ಆಶಾ ಶೆಟ್ಟಿ ಕಲಾಯಿ ಮತ್ತು ಇಂದಿರಾ ಬಿ.ಕೆ ಕಾರ್‍ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಸವಣೂರು ಎನ್. ಸುಂದರ ರೈ, ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಗಿರಿಶಂಕರ್ ಸುಲಾಯ ದೇವಸ್ಯ, ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ್ ರೈ ಕೋರಂಗ, ಪ್ರಧಾನ ಕಾರ್‍ಯದರ್ಶಿ ರಾಕೇಶ್ ರೈ ಕೆಡೆಂಜಿ, ಎ.ಆರ್.ಚಂದ್ರ ಎಡಪತ್ಯ, ಪ್ರಮುಖರಾದ ಶಿವರಾಮ ರೈ ಕಲಾಯಿ, ರಾಮ್‌ಮೋಹನ್ ರೈ ಕಲಾಯಿ, ರಾಮ್‌ಪ್ರಸಾದ್ ರೈ ಕಲಾಯಿ, ಮಹಾಬಲ ಶೆಟ್ಟಿ ಕೊಮ್ಮಂಡ, ಮಹೇಶ್ ಕೆ.ಸವಣೂರು, ಸುರೇಶ್ ರೈ ಸೂಡಿಮುಳ್ಳು, ಸುಪ್ರೀತ್ ರೈ ಖಂಡಿಗ, ಗಂಗಾಧರ್ ಪೆರಿಯಡ್ಕ, ಗಂಗಾಧರ್ ಸುಣ್ಣಾಜೆ, ಜಯರಾಮ ರೈ ಮೂಡಂಬೈಲು, ಸತೀಶ್ ಬಲ್ಯಾಯ, ಕಾಣಿಯೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಚಂದ್ರಾವತಿ ಸುಣ್ಣಾಜೆ, ರಾಜೀವಿ ಶೆಟ್ಟಿ, ಕುಂಜಾಡಿ ಪ್ರಪುಲ್ಲಚಂದ್ರ ರೈ, ಡಾ.ಸುಬ್ರಹ್ಮಣ್ಯ ಭಟ್, ಡಾ. ಶ್ಯಾಮ್ ಸುಂದರ್, ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಭರತ್ ರೈ ಸೂಡಿಮುಳ್ಳು, ಸುಧಾಕರ್ ರೈ ದೇವಸ್ಯ, ಅಣ್ಣಿ ಪೂಜಾರಿ ಹಿಂದಾರು, ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಉಪಕಾರ್‍ಯನಿರ್ವಹಣಾಧಿಕಾರಿ ಜಲಜಾ ಎಚ್ ರೈ, ಮಾಜಿ ಕಾರ್‍ಯದರ್ಶಿ ಸಂಕಪ್ಪ ರೈ ಕಲಾಯಿ, ಜಿ.ಪಂ, ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಕುಶಾಲಪ್ಪ ಗೌಡ ಇಡ್ಯಾಡಿ, ಸವಣೂರು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು, ಮೋಹನ್ ರೈ ಕೆರೆಕ್ಕೋಡಿ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಸಚಿನ್ ಸವಣೂರು, ರಾಮಕೃಷ್ಣ ಪ್ರಭು ಸವಣೂರು, ಗೋಪಾಲಕೃಷ್ಣ ರೈ ಮಾಡಾವು, ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ, ನಿರ್ದೇಶಕ ಪದ್ಮಯ್ಯ ಗೌಡ ಪರಣೆ, ಪ್ರಕಾಶ್ ನೂಜಾಜೆ, ಜತ್ತಪ್ಪ ಗೌಡ ಬರೆಪ್ಪಾಡಿ, ಬಾಲಚಂದ್ರ ರೈ ಕೆರೆಕ್ಕೋಡಿ ಸಹಿತ ಅನೇಕ ಮಂದಿ ಭಾಗವಹಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here