







ಪುತ್ತೂರು: ಗ್ರಾಮ ಪಂಚಾಯತ್ಗಳ ಆಡಳಿತ ಮಂಡಳಿಯ ಪ್ರಸ್ತುತ ಐದು ವರ್ಷಗಳ ಅವಧಿಯು 2026ನೇ ಫೆಬ್ರವರಿಯ ವಿವಿಧ ದಿನಾಂಕಗಳಲ್ಲಿ ಮುಕ್ತಾಯಗೊಳ್ಳಲಿರುವ ಪುತ್ತೂರು ಮತ್ತು ಕಡಬ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕುಗಳ ಎಲ್ಲಾ ಗ್ರಾಮ ಪಂಚಾಯತ್ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿ ದರ್ಶನ್ ಅವರು ಆದೇಶಿಸಿದ್ದಾರೆ.


ದ.ಕ ಜಿಲ್ಲೆಯ ಮಂಗಳೂರು, ಮೂಲ್ಕಿ, ಉಳ್ಳಾಲ, ಮೂಡಬಿದ್ರೆ, ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಆಡಳಿತ ಮಂಡಳಿಗೆ ರಚನೆಯಾಗಿರುವ ಹಾಗೂ ಮುಕ್ತಾಯಗೊಂಡಿರುವ ದಿನಾಂಕಗಳನ್ನು ಪಡೆದು ಪರಿಶೀಲಿಸಿ, ಗ್ರಾಮ ಪಂಚಾಯತ್ಗಳು ಮುಕ್ತಾಯಗೊಳ್ಳಲಿರುವ ದಿನಾಂಕದ ಮುಂದಿನ ದಿನಾಂಕದಿಂದ ಜಾರಿಗೆ ಬರುವಂತೆ ಆಡಳಿತಾಧಿಕಾರಿಗಳನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ.



ಪುತ್ತೂರು ತಾಲೂಕು
ಪುತ್ತೂರು ತಾಲೂಕಿನ ಗ್ರಾ.ಪಂಗಳಾದ ಕಬಕ, ಕುಡಿಪ್ಪಾಡಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ., ಬನ್ನೂರು-ಕೋಡಿಂಬಾಡಿಗೆ ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಜೋಸೆಫ್, 34 ನೆಕ್ಕಿಲಾಡಿಗೆ ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಶ್ ರೈ, ಉಪ್ಪಿನಂಗಡಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಎಚ್, ಹಿರೇಬಂಡಾಡಿ, ಜತ್ತೂರುಗೆ ವಲಯ ಅರಣ್ಯಾಧಿಕಾರಿ ಕಿರಣ್ ಪಿ ಎಂ., ಬಲ್ನಾಡು ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ, ಮುಂಡೂರು, ನರಿಮೊಗ್ರು ಸಮಾಜ ಕಲ್ಯಾಣ ಇಲಾಕೆಯ ಸಹಾಯಕ ನಿರ್ದೇಶಕಿ ಸುನೀತಾ, ಕೆದಂಬಾಡಿ,ಕೆಯ್ಯೂರಿಗೆ ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ಬೆಟ್ಟಂಪಾಡಿ, ಒಳಮೊಗ್ರುಗೆ ಪಶು ವೈದ್ಯಾಧಿಕಾರಿ ಡಾ.ಧರ್ಮಪಾಲ, ಪಾಣಾಜೆಗೆ ಮೀನುಗಾರಿಕಾ ಇಲಾಖೆಯ ಮಂಜುಳಾ ಶೆಣೈ, ಕೊಳ್ತಿಗೆ, ಅರಿಯಡ್ಕಗಲಿಗೆ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ರೇಖಾ ಎ., ಬಡಗನ್ನೂರು, ನೆಟ್ಟಣಿಗೆ ಗ್ರಾಮಕ್ಕೆ ಸಹಕಾರ ಇಲಾಖೆ ಸಹಾಯಕ ನಿಬಂಧಕ ರಘು ಎಸ್.ಎಂ., ನಿಡ್ಪಳ್ಳಿಗೆ ಪಿಎಂಜಿಎಸ್ವೈಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚೇತನ್ ಕುಮಾರ್ರನ್ನು ನೇಮಕಗೊಳಿಸಲಾಗಿದೆ.
ಕಡಬ ತಾಲೂಕು
ಕಡಬ ತಾಲೂಕಿನ ಗ್ರಾ.ಪಂಗಳಾದ ಮರ್ಧಾಳ, ಐತ್ತೂರು, ಕಡ್ಯ ಕೊಣಾಜೆಗೆ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ನೂಜಿಬಾಳ್ತಿಲ, ಕುಟ್ರುಪ್ಪಾಡಿ, ಪೆರಾಬೆಗೆ ಕಡಬ ಪಶುಸಂಗೋಪನಾ ಇಲಾಖೆ ಪಶು ವೈದ್ಯಾಧಿಕಾರಿ ಅಜಿತ್, ಕೊಯಿಲ, ರಾಮಕುಂಜ, ಆಲಂಕಾರುಗಳಿಗೆ ಪಂಚಾಯತ್ರಾಜ್ ಇಂಜಿನಿಯರ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಬಿ.ಎಂ., ಸವಣೂರು, ಬೆಳಂದೂರು, ಕಾಣಿಯೂರುಗಳಿಗೆ ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ ಕೆ., ನೆಲ್ಯಾಡಿ, ಕೌಕ್ರಾಡಿ, ಗೋಳಿತೊಟ್ಟುಗಳಿಗೆ ಪುತ್ತೂರು ಉಪವಿಭಾಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ ದೊಡ್ಡಮನಿ, ಎಡಮಂಗಲ, ಸುಬ್ರಹ್ಮಣ್ಯ, ಬಳ್ಪಗಳಿಗೆ ಕುಕ್ಕೆ ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆ, ವಿಶೇಷ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀಕಾಂತ್ ಪಿ, ಶಿರಾಡಿ, ಬಿಳಿನೆಲೆ, ಕೊಂಬಾರುಗಳಿಗೆ ಪುತ್ತೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಜೆ ಚೆಲುವ ರಂಗಪ್ಪರನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.










