ಪಾಲ್ತಾಡಿ ಇಲ್ಲಾರೆಗುಡ್ಡೆಯಲ್ಲಿ ವಿಜೃಂಭಣೆಯಿಂದ ಜರಗಿದ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ನೇಮೋತ್ಸವ

0

ಕ್ಷೇತ್ರಪಾಲ ಗುಳಿಗ ದೈವ, ಸ್ವಾಮಿ ಕೊರಗಜ್ಜ ದೈವದ ನೇಮ, ಸಾರ್ವಜನಿಕ ಅನ್ನಸಂತರ್ಪಣೆ

ಪುತ್ತೂರು: ಪಾಲ್ತಾಡಿ ಗ್ರಾಮದ ಇಲ್ಲಾರೆಗುಡ್ಡೆಯಲ್ಲಿರುವ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಗರಡಿಯಲ್ಲಿ ಜೀರ್ಣೋದ್ಧಾರಗೊಂಡ ಪ್ರಥಮ ವರ್ಷದ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಹಾಗೂ ಪರಿವಾರ ದೈವಗಳ ನೇಮೋತ್ಸವವು ಫೆ.08 ಮತ್ತು 09 ರಂದು ವಿಜೃಂಭಣೆಯಿಂದ ಜರಗಿತು. ಇಲ್ಲಾರೆಗುಡ್ಡೆಯಲ್ಲಿ ನೂತನವಾಗಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಗರಡಿ ನಿರ್ಮಾಣಗೊಂಡು 2024 ಎಪ್ರೀಲ್ 04 ರಂದು ನೂತನ ಗರಡಿಯ ಪ್ರವೇಶೋತ್ಸವ, ಶ್ರೀ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕವು ನಡೆದಿದೆ. ಪುನರ್ ಪ್ರತಿಷ್ಠಾ ಪ್ರಥಮ ವರ್ಷದ ನೇಮೋತ್ಸವವು ಬಹಳ ಅದ್ಧೂರಿಯಿಂದ ಜರಗಿತು. ವಿಶೇಷವಾಗಿ ಊರಪರವೂರ ಸಾವಿರಾರು ಮಂದಿ ಆಗಮಿಸಿ ನೇಮೋತ್ಸವದಲ್ಲಿ ಪಾಲ್ಗೊಂಡು ಗಂಧ ಪ್ರಸಾದ , ಅನ್ನ ಪ್ರಸಾದ ಸ್ವೀಕರಿಸಿದರು.


ಫೆ.08 ರಂದು ಬೆಳಿಗ್ಗೆ ಶುದ್ಧ ಕಲಶ, ಗಣಪತಿ ಹೋಮ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಸಂಜೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮದ ಬಳಿಕ ಕ್ಷೇತ್ರಪಾಲ ಶ್ರೀ ಗುಳಿಗ ದೈವದ ನೇಮ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು. ರಾತ್ರಿ ಶ್ರೀ ಧರ್ಮರಸು ಭಜನಾ ತಂಡದಿಂದ ಭಜನಾ ಕಾರ್ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವ ಕಾರ್ಯಕ್ರಮ,ತನ್ನಿಮಾಣಿಗ ದೈವ ಗರಡಿ ಇಳಿಯುವ ಕಾರ್ಯಕ್ರಮ ನಡೆದು ಶ್ರೀ ಮೊಗೇರ್ಕಳ ದೈವದ ಗಂಧ ಪ್ರಸಾದ ವಿತರಣೆ ನಡೆಯಿತು. ಫೆ.09 ರಂದು ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆದು ಭಕ್ತಾಧಿಗಳಿಗೆ ಗಂಧ ಪ್ರಸಾದ ವಿತರಣೆ ನಡೆಯಿತು.


ಬಹಳ ವಿಜೃಂಭಣೆಯಿಂದ ಜರಗಿದ ನೇಮೋತ್ಸವದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕಾವು ಹೇಮನಾಥ ಶೆಟ್ಟಿ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ಈರಯ್ಯ, ಶ್ರೀ ಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ದೈವಸ್ಥಾನದ ಅಧ್ಯಕ್ಷ ವಿನಯಚಂದ್ರ ಕೆಳಗಿನಮನೆ, ಆರು ಮನೆಯವರಾದ ವಿನೋದ್ ರೈ ಗುತ್ತಿನಮನೆ, ಜನಾರ್ದನ ಗೌಡ ಕೆಳಗಿನಮನೆ,ಮೋನಪ್ಪ ಗೌಡ ದೊಡ್ಡಮನೆ, ಅಶೋಕ ಗೌಡ ಖಂಡಿಗೆ, ರಾಮಕೃಷ್ಣ ಹಘಡ ಅಂಗಡಿಹಿತ್ಲು, ಜನಾರ್ದನ ಬಂಗೇರ ಬೊಳಿಯಾಲ ಹಾಗೇ ಊರಪರವೂರ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೈವಗಳ ಪ್ರಸಾದ ಸ್ವೀಕರಿಸಿದರು.

ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಗರಡಿಯ ಕಾಪಾಡ ಚೋಮ ಬೇರಿಕೆ, ಗೌರವ ಅಧ್ಯಕ್ಷರಾದ ಚಿನ್ನದ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ ಪ್ರವೀಣ್ ರೈ ನಡುಕೂಟೇಲು, ಗೌರವ ಅಧ್ಯಕ್ಷ ಜಯರಾಮ ಗೌಡ ದೊಡ್ಡಮನೆ, ಅಧ್ಯಕ್ಷ ಬಾಬು ಬಿ.ಕೆ ಬೇರಿಕೆ, ಉಪಾಧ್ಯಕ್ಷರುಗಳಾದ ಚಂದ್ರಶೇಖರ ಉಪ್ಪಳಿಗೆ, ಮಾಧವ ಕಾಯರ್‌ಗುರಿ, ಗಿರೀಶ್ ಹಸಂತ್ತಡ್ಕ, ಪ್ರಧಾನ ಕಾರ್ಯದರ್ಶಿ ಆನಂದ ನಿಲಾವು, ಕಾರ್ಯದರ್ಶಿ ಪೂವಪ್ಪ ಬೇರಿಕೆ, ಜತೆ ಕಾರ್ಯದರ್ಶಿ ಸುಂದರ ಪಿ.ಎಂ, ಕೋಶಾಧಿಕಾರಿ ರಮೇಶ್ ನಿಲಾವು, ಕೋಶಾಧಿಕಾರಿ ದಿನೇಶ್ ಬೇರಿಕೆ, ಮಧ್ಯಸ್ಥ ವಸಂತ ಕಾವುರವರುಗಳು ಭಕ್ತಾಧಿಗಳಿಗೆ ಪ್ರಸಾದ ನೀಡಿ ಸತ್ಕರಿಸಿದರು. ಸಮಿತಿಯ ಸರ್ವ ಸದಸ್ಯರುಗಳು ಸಹಕರಿಸಿದ್ದರು.


ಅದ್ಧೂರಿ ನೇಮೋತ್ಸವ
ಪಾಲ್ತಾಡಿ ಇಲ್ಲಾರೆಗುಡ್ಡೆಯ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಗರಡಿಗೆ ತನ್ನದೇ ಆದ ಇತಿಹಾಸವಿದ್ದು ಇದು ಬಹಳ ಪುರಾತನ ಮಂಜಕೊಟ್ಯವಾಗಿತ್ತು, ಇದು ಸಂಪೂರ್ಣ ಜೀರ್ಣೋದ್ಧಾರಗೊಂಡು ಗರಡಿ ನಿರ್ಮಾಣದೊಂದಿಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವನ್ನು ಪಡೆದುಕೊಂಡು ಇದೀಗ ಪುನರ್ ಪ್ರತಿಷ್ಠೆಯ ಪ್ರಥಮ ವರ್ಷದ ನೇಮೋತ್ಸವ ಬಹಳ ಅದ್ಧೂರಿಯಾಗಿ ನಡೆದಿದೆ. ಊರ ಪರವೂರ ಸಾವಿರಾರು ಮಂದಿ ಸೇರುವ ಮೂಲಕ ಪಾಲ್ತಾಡಿ ಇಲ್ಲಾರೆಗುಡ್ಡೆಯ ವಠಾರ ತುಂಬಾ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು.

LEAVE A REPLY

Please enter your comment!
Please enter your name here