






ಪುಂಜಾಲಕಟ್ಟೆ: ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝಾನಗರ ಕಲಾ ಬಾಗಿಲು ಇಲ್ಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನದ ಆಂಗ್ಲ ಭಾಷಾ ತರಬೇತಿ ಶಿಬಿರ ನಡೆಯಿತು.



ಖ್ಯಾತ ಶಿಕ್ಷಣ ತಜ್ಞ, ರಾಜ್ಯ ಪ್ರಶಸ್ತಿ ವಿಜೇತ ಆದಂ ಸಾಹೇಬ್ ನೆಲ್ಯಾಡಿ ಈ ತರಬೇತಿಯನ್ನು ನಡೆಸಿಕೊಟ್ಟರು. ಆಂಗ್ಲ ಭಾಷೆಯು ಒಂದು ವಿನೋದದ ಭಾಷೆಯಾಗಿ ಸ್ವೀಕರಿಸಿ ಕಲಿತರೆ ಅದರಷ್ಟು ಸುಲಭದ ಭಾಷೆ ಬೇರೊಂದು ಇಲ್ಲ. ಪ್ರತಿಯೊಂದನ್ನು ಅರ್ಥ ಮಾಡಿಕೊಂಡು ಓದಿ ಉತ್ತಮ ಅಂಕ ಪಡೆಯಿರಿ ಎಂದು ಹೇಳುತ್ತಾ, ಯಾವ ರೀತಿಯಾಗಿ ಕಲಿಯಬೇಕೆಂದು ಹಾಗೂ ಭಾಷೆಯ ಗ್ರಾಮರನ್ನು ಬಿಡಿ ಬಿಡಿಯಾಗಿ ವಿವರಿಸಿದರು.



ತರಗತಿ ಶಿಕ್ಷಕಿ ಎಲ್ಸಿ ಲಸ್ರಾದೋ ಸ್ವಾಗತಿಸಿ, ಶಿಕ್ಷಕ ಜಲಾಲುದ್ದೀನ್ ಧನ್ಯವಾದಗೈದರು.









