ಕುಣಿಯದಲ್ಲಿ ನಡೆದ ಸಮಸ್ತ ಶತಾಬ್ದಿ ಕಾರ್ಯಕ್ರಮ- AIKMCC ಆಂಬುಲನ್ಸ್ ನಿಂದ 5 ದಿನಗಳ ಉಚಿತ ಸೇವೆ

0

ಪುತ್ತೂರು: ಕುಣಿಯದಲ್ಲಿ ನಡೆದ ಸಮಸ್ತ ಶತಾಬ್ದಿ ಕಾರ್ಯಕ್ರಮದಲ್ಲಿ AIKMCC ಪುತ್ತೂರು- ಮಂಗಳೂರು ಆಂಬುಲನ್ಸ್ ತಂಡವು 5 ದಿನಗಳ ಉಚಿತ ಸೇವೆಯನ್ನು ನಿರ್ವಹಿಸಿದೆ.


ಸುಮಾರು 40ಕ್ಕೂ ಹೆಚ್ಚು ತೀವ್ರ ನಿಗಾ ಪರಿಚರಣ ರೋಗಿಗಳನ್ನು AIKMCC ಆಂಬುಲೆನ್ಸ್ ಮೂಲಕ ಆಸ್ಟರ್ ಮಿಮ್ಸ್ ಹಾಗೂ ಸಿಎಂ ಮಲ್ಟಿ ಸ್ಪೆಷಲಿಟಿ ಹಾಸ್ಪಿಟಲ್ ಗೆ ತಲುಪಿಸುವ ಉಚಿತ ಸೇವೆಯನ್ನು ಕೈಗೊಂಡಿತ್ತು. ಫೆಬ್ರವರಿ 4ರಿಂದ 8ರವರೆಗೆ ನಡೆದ ಸಮಸ್ತ 100ನೇ ವಾರ್ಷಿಕೋತ್ಸವದ ಸ್ಥಳದಲ್ಲೇ ಸಮಸ್ತ ಅಧೀನದ 24ಗಂಟೆಯೂ SKSSF ಮಿಮ್ಸ್ ನ 30ರಷ್ಟು ವೆದ್ಯರು,ಹಾಗೂ SKSSF ಮಿಮ್ಸ್ ನ 20ಕ್ಕೂ ಹೆಚ್ಚು ನರ್ಸಿಂಗ್ ಸಿಬ್ಬಂದಿ ಹಾಗೂ SKSSF ಮಿಮ್ಸ್ ನ Official ಸ್ಟಾಫ್ ಹಾಗೂ 30ಕ್ಕೂ ಹೆಚ್ಚು ಆಂಬುಲೆನ್ಸ್ ಗಳು ಉಚಿತ ಸೇವೆಯನ್ನು ಸಲ್ಲಿಸಿದ್ದು, ಅರೆಕಾಲಿಕ ವೈದ್ಯರು ಸೇವೆಯನ್ನು ನೀಡುತ್ತಿದ್ದರು.

ಮಂಗಳೂರು AIKMCC ಆಂಬುಲೆನ್ಸ್ ನಲ್ಲಿ AIKMCC ಮಂಗಳೂರು ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ವಿಖಾಯ ಆಕ್ಟಿವ್ ವಿಂಗ್ ಸದಸ್ಯ ಸಯ್ಯದ್ ಆಫ್ಹಮ್ ತಂಙಳ್, AIKMCC ಸುಳ್ಯ ಅಧ್ಯಕ್ಷ ವಿಖಾಯ ಆಕ್ಟಿವ್ ವಿಂಗ್ ಸದಸ್ಯ ಖಲಂದರ್ ಎಲಿಮಲೆ, ವಿಖಾಯ ಆಕ್ಟಿವ್ ವಿಂಗ್ ಸದಸ್ಯರೂ ಹಾಗೂ AIKMCC ಆಂಬುಲೆನ್ಸ್ ಚಾಲಕರೂ ಆಗಿರುವ ಜಬ್ಬಾರ್ KMCC ಹಾಗೂ ತಾಜುದ್ದೀನ್ ತರ್ಲಿ ಹಾಗೂ ಮೊೖದೀನ್ ಮೈಂದನಡ್ಕ ಅವರು ಸೇವೆಯನ್ನು ನೀಡಿದ್ದರು.


ಈ ಸಂದರ್ಭದಲ್ಲಿ AIKMCC ಪುತ್ತೂರಿನ ಖಜಾಂಜಿ ಅಝೀಝ್‌ ಬಪ್ಪಳಿಗೆ, AIKMCC ಕಾರ್ಯಾಧ್ಯಕ್ಷ ಹನೀಫ್‌ ಮುಕ್ವೆ, AIKMCC ಪುತ್ತೂರು truma blood care ನ ಹನೀಫ್‌ ನಂದಿನಿ , Aikmcc ಪುತ್ತೂರು ಮಾಧ್ಯಮ ವಿಭಾಗದ ಕಲಂದರ್‌, ಶೇಖ್‌ ನಿಝಾಮುದ್ದೀನ್‌ ಹಾಗೂ ಅನೇಕ ಐಕೆಎಂಸಿಸಿ ಸದಸ್ಯರುಗಳು ಭಾಗವಹಿಸಿ ಸೇವೆಯಲ್ಲಿ ತೊಡಗಿದ್ದರು.

LEAVE A REPLY

Please enter your comment!
Please enter your name here