ಬಲ್ನಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜಿನ ಮಕ್ಕಳಿಂದ ಎನ್‌ಎಸ್‌ಎಸ್ ಶಿಬಿರ

0

ಪುತ್ತೂರು: ಬಲ್ನಾಡು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಡೆಕಲ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಕ್ಕಳ ಎನ್‌ಎಸ್‌ಎಸ್ ಶಿಬಿರವು ಫೆ.9ರಂದು ಉದ್ಘಾಟನೆಗೊಂಡಿದೆ.

ಫೆ.10ರಂದು ಶಿಬಿರದಲ್ಲಿ ಉದ್ಯಮಿ ಅಬೂಬಕ್ಕರ್ ಉಜ್ರುಪಾದೆಯವರು ಹಾಗೂ ಮುಖ್ಯಗುರುಗಳಾದ ಭವಾನಿ ಎಂ, ವಿವಿಧ ಗಣ್ಯರು ಭಾಗವಹಿಸಿದ್ದರು. ಫೆ.9ರಿಂದ ಫೆ.15ರವರೆಗೂ ಶಿಬಿರ ನಡೆಯುತ್ತಿದೆ, ಪ್ರತಿದಿನ ಬೆಳಿಗ್ಗೆ ಧ್ವಜಾರೋಹಣ, ಶ್ರಮದಾನ, ಶೈಕ್ಷಣಿಕ ಕಾರ್ಯಕ್ರಮ ಮತ್ತು ಪ್ರತಿ ದಿನ ಸಂಜೆ ಎನ್‌ಎಸ್‌ಎಸ್‌ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ವಿಶೇಷವಾಗಿ ಫೆ.13ರಂದು ಸಾಯಂಕಾಲ ಬಲ್ನಾಡು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿದಿನ ಸಾಯಂಕಾಲದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಲಾ ಎಸ್‌ಡಿಎಂಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳ ಸಂಘದ ಸದಸ್ಯರು, ಪೋಷಕರು, ಊರಿನ ಸಮಸ್ತ ಗ್ರಾಮಸ್ಥರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here