ಬಿಲ್ಡ್ ಟೆಕ್ – 2026 ಪ್ರಚಾರ ವಾಹನಕ್ಕೆ ಹಸಿರು ನಿಶಾನೆ

0


ಪುತ್ತೂರು: ಅಸೋಸಿಯೇಷನ್ ಆಫ್ ಕನ್ಸಲ್ಟಿoಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಸೆಂಟರ್ ಮತ್ತು ಯು.ಎಸ್. ಕಮ್ಯುನಿಕೇಷನ್ಸ್ ವತಿಯಿಂದ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಅರಿವು ಕೇಂದ್ರದ ಸಹಯೋಗದೊಂದಿಗೆ ಫೆ.21 ರಿಂದ ಫೆ.23ರವರೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿ ಪ್ರಥಮ ಬಾರಿಗೆ ” ಬಿಲ್ಡ್ ಟೆಕ್ ಎಕ್ಸ್ಪೋ – 2026″ ನಡೆಯಲಿದ್ದು, ಈ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ದೇವಸ್ಥಾನದ ರಥ ಬೀದಿಯಲ್ಲಿ ಚಾಲನೆ ನೀಡಲಾಯಿತು.


 ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಕಟ್ಟಡ ಸಾಮಾಗ್ರಿಗಳ, ಗೃಹಾಲಂಕಾರ ವಸ್ತುಗಳು, ಗೃಹ ಸಾಲ ಮತ್ತು ಪೀಠೋಪಕರಣಗಳ ಬೃಹತ್ ಪ್ರದರ್ಶನ ಮೇಳ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ನೂತನವಾಗಿ ಮನೆ ನಿರ್ಮಾಣ ಮಾಡುವವರಿಗೆ ಉಚಿತ ಮಾಹಿತಿ, ಕಟ್ಟಡ ನಿರ್ಮಾಣ ಸಾಮಗ್ರಿಗಳ ಬಗ್ಗೆ ವಿಶೇಷ ಸ್ಟಾಲ್ ಗಳು ಇರಲಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಕಾರ್ಯಕ್ರಮದ ಪ್ರಚಾರಕ್ಕೆ ವಿಶೇಷ ವಾಹನದ ವ್ಯವಸ್ಥೆ ಮಾಡಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಯಿತು.


 ಈ ಸಂದರ್ಭದಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಸೆಂಟರ್ ನ ಕಾರ್ಯದರ್ಶಿ ವೆಂಕಟ್ ರಾಜ್, ವಿಜಯ್ ಪಾಲಾರ್, ಯು. ಎಸ್ ಕಮ್ಯುನಿಕೇಷನ್ ನ ಉಮಾಪತಿ, ರಕ್ಷಿತ್, ಕಲ್ಮೇಶ್ ತೋಟದ್ ಹಾಗೂ ಕಿರಣ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here