







ಆಲಂಕಾರು: ಕುಂತೂರು ಗ್ರಾಮದ ನೂಜಿಲ ದಿ. ನಾರಾಯಣ ಆಳ್ವರ ಪುತ್ರ ವಿಶ್ವನಾಥ ಆಳ್ವ (66.ವ) ರವರು ಅಲ್ಪಕಾಲ ಅಸೌಖ್ಯದಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಾಕಾರಿಯಾಗದೇ ಸ್ವಗೃಹದಲ್ಲಿ ಫೆ.16ರಂದು ನಿಧನರಾದರು.


ಮೃತರು ಕುಂತೂರಿನಲ್ಲಿ ಅಂಗಡಿ ವ್ಯಾಪಾರಸ್ಥರಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು. ಮೃತರು ಪತ್ನಿ ಶೀಲಾವತಿ, ಪುತ್ರ ಉಪ್ಪಿನಂಗಡಿ ಸಿ.ಎ ಬ್ಯಾಂಕ್ ನ ಬ್ರಾಂಚ್ ಮ್ಯಾನೇಜರ್ ಪ್ರವೀಣ್ ಅಳ್ವ, ಸೊಸೆ ಎಸ್.ಡಿ.ಸಿ.ಸಿ ಬ್ಯಾಂಕ್ ಗುತ್ತಿಗಾರು ಶಾಖೆಯ ಉದ್ಯೋಗಿ ದೀಕ್ಷಾ, ಪುತ್ರಿ ನವೀನ, ಬೆಸ್ಕಾಂ ಉದ್ಯೋಗಿ ನಳಿನಿ, ಅಳಿಯಂದಿರಾದ ಭಾಸ್ಕರ ರೈ ಬಾಳಿಲ, ದೇವೆಂದ್ರ ಬೆಂಗಳೂರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.













