ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘ- ಅಧ್ಯಕ್ಷರಾಗಿ 5ನೇ ಬಾರಿಗೆ ತೋಯಜಾಕ್ಷ ಶೆಟ್ಟಿ, ಉಪಾಧ್ಯಕ್ಷರಾಗಿ 2ನೇ ಬಾರಿಗೆ ತನಿಯಪ್ಪ ಪೂಜಾರಿ

0

ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಐದನೇ ಬಾರಿಗೆ ಎಸ್. ತೋಯಜಾಕ್ಷ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಎರಡನೇ ಬಾರಿಗೆ ತನಿಯಪ್ಪ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಚುನಾವಣೆ ಸಂದರ್ಭ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯದೇ ಅವಿರೋಧ ಆಯ್ಕೆ ನಡೆಯಿತು. ರಿಟರ್ನಿಂಗ್ ಅಧಿಕಾರಿ ಬಿ. ನಾಗೇಂದ್ರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪುಷ್ಪಾ ಡಿ. ಸಹಕರಿಸಿದರು.


ಸಂಘದ ನಿರ್ದೇಶಕರುಗಳಾದ ಡಾ. ರಾಜಗೋಪಾಲ ಶರ್ಮ, ನೀಲಪ್ಪ ಗೌಡ, ಲಕ್ಷ್ಮಣ ನಾಕ್, ಸುನೀಲ್ ನೆಲ್ಸನ್ ಪಿಂಟೋ, ಜಾರಪ್ಪ ಗೌಡ, ಜಯಲಕ್ಷ್ಮೀ, ರೇವತಿ ಪಿ., ಬೇಬಿ, ಅಬ್ದುಲ್ ಲತೀಫ್, ಶಾಂತ ಹಾಗೂ ಡಿ.ಸಿ.ಸಿ. ಬ್ಯಾಂಕ್‌ನ ಪ್ರತಿನಿಧಿ ಯೋಗೀಶ್ ಎಚ್., ಪಂಚಗ್ಯಾರಂಟಿ ಯೋಜನೆಯ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ್ ಫಾರೂಕ್, ಪೆರ್ನೆ ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷೆ ವನಿತಾ, ಸಂಘದ ಮಾಜಿ ಉಪಾಧ್ಯಕ್ಷ ಅಬ್ದುಲ್ ಶಾಫಿ, ಮಾಜಿ ನಿರ್ದೇಶಕರುಗಳಾದ ವಿಶ್ವನಾಥ ಶೆಟ್ಟಿ, ಬಶೀರ್, ಮಹಮ್ಮದ್ ಶರೀಫ್, ಚೆನ್ನಕೇಶವ ಯಾನೆ ಚೆನ್ನ ಮೇರ, ಸಂಘದ ಸದಸ್ಯರುಗಳಾದ ಪದ್ಮಯ ಗೌಡ, ಪುಷ್ಕರ ಪೂಜಾರಿ. ಮಿತ್ರದಾಸ ರೈ, ಸುಂದರ, ಪುರುಷೋತ್ತಮ ಗೌಡ, ರವೀಂದ್ರ ಶೆಟ್ಟಿ, ಚೇತನ್ ಕುಮಾರ್, ಉಮೇಶ್ ಪೂಜಾರಿ, ರಾಜಶೇಖರ್ ಶೆಟ್ಟಿ, ಅಶ್ರಫ್ ಈ ಸಂದರ್ಭ ಉಪಸ್ಥಿತರಿದ್ದು, ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here