






ಕಡಬ : ತಾಲೂಕಿನ ಕೊಂಬಾರು ಸಿರಿಬಾಗಿಲು, ಕೈಕಂಬ ಪ್ರದೇಶದಲ್ಲಿ ಗುರುವಾರ ರಾತ್ರಿ ತುಂತುರು ಮಳೆಯಾಗಿದ್ದು ಬೆಳಿಗ್ಗೆ ಮನೆಗಳ ಅಂಗಳ, ಗಿಡಗಳು ಹಾಗೂ ಒಣ ಹಾಕಿದ ಬಟ್ಟೆಗಳ ಮೇಲೆ ಹಳದಿ ಬಣ್ಣದ ಸೂಕ್ಷ್ಮ ಚುಕ್ಕಿಗಳು ಕಂಡುಬಂದಿವೆ.


ಈ ಚುಕ್ಕಿಗಳು ಒಣಗಿದ ನಂತರ ಹತ್ತಿಯಿಂದ ತೆಗೆಯುವಾಗ ಹಳದಿ ಪೌಡರ್‌ನಂತೆ ಕಾಣುತ್ತಿರುವುದು ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ.



ಈ ಘಟನೆಗೆ ಸಂಬಂಧಿಸಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಹಿನ್ನಲೆಯಲ್ಲಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಜನರು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ ಇಂತಹ ಹಳದಿ ಕಲೆಗಳು ಹಲವು ಮನೆಗಳಲ್ಲಿ ಕಂಡುಬಂದಿವೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾದರಿ ಸಂಗ್ರಹಿಸಿದ್ದಾರೆ. ಇದು ನಿಜವಾಗಿಯೂ ಹಳದಿ ಮಳೆಯೇ ಅಥವಾ ಬೇರೆ ಕಾರಣವೇ ಎಂಬುದು ಪರಿಶೀಲನಾ ವರದಿ ನಂತರ ಸ್ಪಷ್ಟವಾಗಲಿದೆ.ಅದುವರೆಗೆ ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಆತಂಕ ಮುಂದುವರಿದಿದೆ.










