






ಪುತ್ತೂರು: ನ್ಯಾಯವಾದಿ ದಿ. ಕುಂಜಾಡಿ ರಘುನಾಥ ರೈಯವರ ಅಳಿಯ ಡಾ. ವಿಶ್ವನಾಥ್ ಶೆಟ್ಟಿ (69 ವ.) ಹೃದಯಾಘಾತದಿಂದ ಫೆ.25ರಂದು ನಿಧನರಾದರು.


ಕುಂಜಾಡಿ ದಿ. ರಘುನಾಥ ರೈ ರೈಯವರ ಪುತ್ರಿ ವಕೀಲರಾಗಿರುವ ಅನ್ನಪೂರ್ಣ ಅವರ ಪತಿಯಾಗಿರುವ ವಿಶ್ವನಾಥ್ ಶೆಟ್ಟಿ ಅವರು ಪಶು ವೈದ್ಯಕೀಯದಲ್ಲಿ ಉಪ ನಿರ್ದೇಶಕರಾಗಿ ಪುತ್ತೂರು, ಬಂಟ್ವಾಳ ಮತ್ತು ಉಡುಪಿ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಫೆ.26 ರಂದು ಸಂಜೆ ಕುಂದಾಪುರ ತಾಲೂಕಿನ ಕೊರ್ಗಿ ನೂಜಿಮನೆಯಲ್ಲಿ ನಡೆಯಲಿದೆ.













