






ಪುತ್ತೂರು: ಸವಣೂರು ಗ್ರಾಮದ ಊರುಸಾಗು ಜಯಪ್ರಕಾಶ್ ಮತ್ತು ನವ್ಯಶ್ರಿ ಅವರ ಪುತ್ರ ರಿದ್ವಿಕ್ ಅವರ ಹುಟ್ಟು ಹಬ್ಬ ಆಚರಣೆಯು ಇತ್ತೀಚಿಗೆ ಊರುಸಾಗು ಮನೆಯಲ್ಲಿ ನಡೆಯಿತು.



ಈ ಸಂದರ್ಭದಲ್ಲಿ ಸಹಕಾರರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈ ಮತ್ತು ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪುರಸ್ಕೃತ ಗಿರಿಶಂಕರ್ ಸುಲಾಯ ದೇವಸ್ಯ ಅವರನ್ನು ಸವಣೂರು ಗ್ರಾ.ಪಂ, ಮಾಜಿ ಸದಸ್ಯ ಚಂದಪ್ಪ ಪೂಜಾರಿ ಮತ್ತು ಮನೆಯವರು ಸನ್ಮಾನಿಸಿ, ಗೌರವಿಸಿದರು. ಸೋಮಲತಾ ಚಂದಪ್ಪ ಪೂಜಾರಿ, ದಯಪ್ರಸಾದ್, ಜಯಪ್ರಕಾಶ್, ಸರಸ್ವತಿ ರವಿ ಕೇಕುಡೆ, ಅರುಣ ದಿನೇಶ್ ಕೊಲಾಡಿ, ಅಕ್ಷತಾ ದಯಾಪ್ರಸಾದ್ ಹಾಗೂ ನವ್ಯಶ್ರೀ ಜಯಪ್ರಕಾಶ್ ರವರುಗಳು ಅತಿಥಿಗಳನ್ನು ಗೌರವಿಸಿದರು. ಸಮಾರಂಭದಲ್ಲಿ ನೂರಾರು ಮಂದಿ ಭಾಗವಹಿದರು. ಸುದೇಶ್ ರೈ ಕಾರ್ಯಕ್ರಮ ನಿರೂಪಿಸಿದರು.












