ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂಡಳಿ ವತಿಯಿಂದ ನಗರ ಭಜನೆ ಪ್ರಾರಂಭ, ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ವಿಟ್ಲ: ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂಡಳಿಯ ವತಿಯಿಂದ ನಡೆಯುವ ಇಡ್ಕಿದು ಮತ್ತು ಕುಳ ಗ್ರಾಮ ವ್ಯಾಪ್ತಿಯ ಮನೆ ಮನೆ ಭಜನಾ ಸೇವೆಗೆ ಸಮಿತಿಯ ಗೌರವ ಸಲಹೆಗಾರರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ರವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾ.೨೨ರಂದು ನಡೆಯಲಿರುವ ಶ್ರೀ ಶಾರದಾಂಭ ಭಜನಾ ಮಂಡಳಿಯ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಭಜನಾ ಮಂಡಳಿ ಟ್ರಸ್ಟ್ ನ ಅದ್ಯಕ್ಷರಾದ ಜಗದೀಶ್ ಪೂಜಾರಿ ಅಳಕೆಮಜಲು ಭಜನಾ ಸಮಿತಿಯ ಅಧ್ಯಕ್ಷರಾದ ಕೃಷ್ಣ ಕಿಶೋರ್ ಭಟ್ ಪೆಲತ್ತಿಂಜ, ಉಪಾಧ್ಯಕ್ಷರಾದ ಉದಯ್ ಕುಲಾಲ್ ಪುಂಡಿಕಾಯಿ, ಕಾರ್ಯದರ್ಶಿ ಸಂಜೀವ ಗೌಡ ಪೆಲತ್ತಿಂಜ, ಸದಸ್ಯರಾದ ತಿರುಮಲೇಶ್ವರ ನಾಯ್ಕ್, ಪ್ರದೀಪ್ ಶೆಟ್ಟಿ, ಕುಮಾರ ಅಳಕೆಮಜಲು, ಕಿಶೋರ್ ಕುಲಾಲ್, ನಿತಿನ್ ನಾಯ್ಕ್, ಧನುಷ್ ಹಾಗೂ ಮಹಿಳಾ ಸಮಿತಿ ಅಧ್ಯಕ್ಷರಾದ ಗೀತಾ ನಾಯ್ಕ್ , ಉಪಾಧ್ಯಕ್ಷರಾದ ರೂಪಾ ಕೆ.ವಿ, ಸದಸ್ಯರಾದ ಸುಗಂಧಿನಿ ಪೆಲತ್ತಿಂಜ, ಹೇಮಾವತಿ, ಜಯಪ್ರಭಾ ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here