ಶರವೂರು ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ 25ನೇ ಸೇವೆ

0

ಆಲಂಕಾರು: ಶ್ರೀ ದುರ್ಗಾಂಬಾ ಕಲಾ ಸಂಗಮ ಶರವೂರು ಆಲಂಕಾರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ 25ನೇ ಸೇವೆಯಾಗಿ ಕೃಷ್ಣ ಸಂಧಾನ ತಾಳಮದ್ದಳೆ ಫೆ.28ರಂದು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲ ಭಟ್ ನೈಮಿಷ, ಡಿ.ಕೆ.ಆಚಾರ್ಯ ಹಳೆನೇರೆಂಕಿ, ಶಿವರಂಜನ್ ಕಡಬ, ಸುಧಾಂಶು ಆಚಾರ್ಯ ಕಲ್ಲಡ್ಕ. ಚೆಂಡೆ ಮದ್ದಳೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ವೆಂಕಟರಮಣ ಆಚಾರ್ಯ ಕಲ್ಮಡ್ಕ ಸಹಕರಿಸಿದರು. ಮುಮ್ಮೇಳದಲ್ಲಿ ರಾಘವೇಂದ್ರ ಭಟ್ ತೋಟಂತಿಲ, ಬಾಲಕೃಷ್ಣ ಕೇಪುಳು, ದಿವಾಕರ ಆಚಾರ್ಯ ಹಳೆನೇರೆಂಕಿ (ಕೃಷ್ಣ), ರಾಮ್‌ಪ್ರಸಾದ್ ಆಲಂಕಾರು, ರಾಮ್ ಪ್ರಕಾಶ್ ಕೊಡಂಗೆ (ವಿದುರ), ಅಮ್ಮಿ ಗೌಡ ನಾಲ್ಗುತ್ತು (ಕೌರವ), ನಾರಾಯಣ ಭಟ್ ಆಲಂಕಾರು (ಭಾನುಮತಿ) ಸಹಕರಿಸಿದರು.

ಸೇವಾರ್ಥಿಗಳಾದ ಶ್ರೇಯಾ ರಾವ್ ಶರವೂರು ಬೆಂಗಳೂರು, ಅಮ್ಮಿಗೌಡ ನಾಲ್ಗುತ್ತು ಬಲ್ಯ ಇವರಿಗೆ ದೇವಸ್ಥಾನದ ವತಿಯಿಂದ ಪ್ರಸಾದ ನೀಡಲಾಯಿತು. ದುರ್ಗಾಂಬಾ ಕಲಾ ಸಂಗಮದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಹೇಮಂತ್ ರೈ ಮನವಳಿಕೆ, ಭಕ್ತಾಭಿಮಾನಿಗಳು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು. ಕಲಾ ಸಂಗಮದ ಕಾರ್ಯದರ್ಶಿ ದಿವಾಕರ ಆಚಾರ್ಯ ಸ್ವಾಗತಿಸಿ, ಕೋಶಾಧಿಕಾರಿ ರಾಮ್‌ಪ್ರಸಾದ್ ಆಲಂಕಾರು ವಂದಿಸಿದರು.

LEAVE A REPLY

Please enter your comment!
Please enter your name here