ಅರಿಯಡ್ಕ ಮಿಫ್ತಾಹುಲ್ ಉಲೂಮ್ ಮದರಸ ಶೇ.100 ಫಲಿತಾಂಶದ ಸಾಧನೆ

0

ಪುತ್ತೂರು: ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಮಂಡಳಿ ನಡೆಸಿದ 2025-26ನೇ ಸಾಲಿನ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಅರಿಯಡ್ಕ ಮಿಫ್ತಾಹುಲ್ ಉಲೂಮ್ ಮದರಸ ಶೇ.100 ಫಲಿತಾಂಶದ ಸಾಧನೆ ಮಾಡಿದೆ. 12ನೇ ತರಗತಿಯ ತಮೀಝ 300ರಲ್ಲಿ 297 ಅಂಕ ಹಾಗೂ ಶೈಮ 294 ಅಂಕ ಪಡೆದು ಟಾಪರ್ ಆಗಿದ್ದಾರೆ. ಮುಹಮ್ಮದ್ ಆಫ್ರಾಹ್ ಮತ್ತು ರಝಿಯ ಅವರು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಐದನೆ ತರಗತಿಯ ಫಾತಿಮಾ, ಶಾಝಿಲ್ ಹಾಗೂ ಮುಹಮ್ಮದ್ ತ್ವಾಹ ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಉತ್ತಮ ಫಲಿತಾಂಶ ದಾಖಲಿಸಲು ಕಾರಣಕರ್ತರಾದ ಅಧ್ಯಾಪಕರಾದ ಎ.ಎಂ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ಅವರಿಗೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ ಜಮಾಅತ್ ಸಮಿತಿ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ಪ್ರ.ಕಾರ್ಯದರ್ಶಿ ಅಬ್ಬಾಸ್ ಹಾಜಿ, ಉಪಾಧ್ಯಕ್ಷ ಎ ಆರ್ ಇಬ್ರಾಹಿಂ, ಕೋಶಾಧಿಕಾರಿ ರಿಯಾಝ್ ಶೇಖಮಲೆ, ಸದರ್ ಮುಅಲ್ಲಿಂ ಅಬ್ದುಲ್ ಕರೀಮ್ ಬಾಹಸನಿ ರೆಂಜ ಅಭಿನಂದಿಸಿದರು. ಪ್ರಸ್ತುತ ಮದ್ರಸದ +1 ತರಗತಿ ವಿದ್ಯಾರ್ಥಿನಿ ಫಾತಿಮತ್ ಇಶ್ರತ್ 2025-26ರಲ್ಲಿ ನಡೆದ ಸ್ಮಾರ್ಟ್ ಎಕ್ಸಾಮ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ತೃತೀಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನೂ ಪಡೆದಿದ್ದರು.

LEAVE A REPLY

Please enter your comment!
Please enter your name here