






ಪುತ್ತೂರು: ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದಲ್ಲಿ ಮಾತೃವಂದನಾ, ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಹಾಗೂ ಸಾಮೂಹಿಕ ಸಹಭೋಜನ ಕಾರ್ಯಕ್ರಮ ಫೆ.೨೮ರಂದು ನಡೆಯಿತು. ಅತಿಥಿಗಳಿಂದ ದೀಪ ಪ್ರಜ್ವಲನೆ, ಭಾರತ ಮಾತೆಗೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು.



ಮಾತೃಭಕ್ತಿಯನ್ನು ಎಳವೆಯಲ್ಲಿ ಪರಿಚಯಿಸುವ ದೃಷ್ಟಿಯಲ್ಲಿ ಮಕ್ಕಳಿಂದ ಮಾತೆಯರಿಗೆ ಮಾತೃವಂದನಾ ಕಾರ್ಯಕ್ರಮ ನಡೆಯಿತು. ಬಳಿಕ ಮಕ್ಕಳ ಸಾಮೂಹಿಕ ಹುಟ್ಟುಹಬ್ಬವು ಮಾತೆಯರು ಅವರ ಮಕ್ಕಳಿಗೆ ಆರತಿ ಬೆಳಗಿ, ಅಕ್ಷತೆಯನ್ನು ಹಾಕಿ ಹರಸುವುದರ ಮೂಲಕ ನಡೆಯಿತು. ಅಖಂಡ ಭಾರತಕ್ಕೆ ಅತಿಥಿಗಳು ಹಾಗೂ ಮಾತೆಯರು ತಮ್ಮ ಮಕ್ಕಳ ಜೊತೆ ದೀಪ ಬೆಳಗಿಸಿದರು.



ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದ ಗೀತಾಜ್ಞಾನ ಯಜ್ಞ ಟ್ರಸ್ಟ್ನ ಸ್ಥಾಪಕಾಧ್ಯಕ್ಷರು ಹಾಗೂ ಕುಟುಂಬ ಪ್ರಬೋಧನ್ ಕಾರ್ನಾಟಕ ಪ್ರಾಂತ ಇದರ ಸಹಸಂಯೋಜಕ ಸುಬ್ರಾಯ ನಂದೋಡಿ ಯವರು ಮಕ್ಕಳ ಹಾಗೂ ಮಾತೆಯರ ಬಾಂಧವ್ಯದ ಕುರಿತು ಮಾತನಾಡಿದರು. ಮಕ್ಕಳ ವರ್ತನೆಯ ಮೇಲೆ ಮಾತೆಯರ ಪ್ರಭಾವ ಹಾಗೂ ಇದರ ಜೊತೆಗೆ ಭಗವದ್ಗೀತೆಯ ಕುರಿತಾದ ಕೆಲ ಮಾಹಿತಿಯನ್ನು ಹಂಚಿಕೊಂಡರು. ಶ್ರೀನಿವಾಸ ಟ್ರೇಡರ್ಸ್ನ ಮಾಲಕ ವರದರಾಜ್ ಇಂದಾಜೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪುಟಾಣಿ ಕಾರುಣ್ಯ ಹಾಗೂ ಶಿಶುಮಂದಿರದ ಮಕ್ಕಳಿಂದ ದೀಪಜ್ಯೋತಿ, ಸರಸ್ವತಿ ವಂದನೆ ನಡೆಯಿತು. ಪುಟಾಣಿಗಳಾದ ಆದ್ಯಾ ಸ್ವಾಗತಿಸಿ, ಚಾರ್ವಿತ್ ಪಂಚಾಂಗ ಪಠಣ ನೆರವೇರಿಸಿದರು. ಲಕ್ಷ್ಮಿಪ್ರಭಾ ಇವರು ವೈಯುಕ್ತಿಕ ಹಾಡು ಹಾಡಿದರು. ಶಿಶುಮಂದಿರದ ಅಧ್ಯಕ್ಷ ರಾಜ್ಗೋಪಾಲ್ ಭಟ್ರವರು ಪ್ರಾಸ್ತಾವಿಕ ಬಾಷಣ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಪುಟಾಣಿ ಧನ್ವಿಕಾ ಧನ್ಯವಾದ ಸಮರ್ಪಿಸಿದರು.

ಬಳಿಕ ಮಾತೆಯರು ತಯಾರಿಸಿದ ವಿವಿಧ ಖಾದ್ಯಗಳನ್ನು ಸವಿಯುವ ಬೇಧಭಾವಗಳನ್ನು ಮರೆತು ಸಹಭೋಜನವನ್ನು ಮಾಡುವ ಕಾರ್ಯಕ್ರಮವು ಎಲ್ಲಾ ಭೇದ ಮರೆತು ಹಾಡಿನ ಮೂಲಕ ಭೋಜನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಪಾಲಕರು, ಮಾತಾಜಿಯವರು, ನೆರೆಹೊರೆಯವರು ಉಪಸ್ಥಿತರಿದ್ದರು.










