






ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಹುಣ್ಣಿಮೆ 2ನೇ ಮಖೆಕೂಟ ಭಕ್ತಿ ಸಡಗರದೊಂದಿಗೆ ಮಾ.2ರಂದು ರಾತ್ರಿ ನಡೆಯಿತು.
ವೇದಮೂರ್ತಿ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ರಾತ್ರಿ ಬಲಿ ಹೊರಟು ಉತ್ಸವ ನಡೆಯಿತು. ಬಳಿಕ ಶ್ರೀ ದೇವರು ರಥಾರೂಢರಾಗಿ ಭಕ್ತಾದಿಗಳಿಂದ ಬ್ರಹ್ಮರಥ ಸೇವೆ ನಡೆದು ರಥ ಬೀದಿಯಲ್ಲಿ ರಥೋತ್ಸವ ಜರಗಿತು. ಬಳಿಕ ಬಲಿ ಪೂಜೆಯಾಗಿ ಮಹಾಪೂಜೆ ನಡೆಯಿತು. ಇದೇ ವೇಳೆ ಆಕರ್ಷಕ ಸುಡುಮದ್ದು ಪ್ರದರ್ಶನವೂ ಕಣ್ಮನ ಸೆಳೆಯಿತು.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಉಪ್ಪಿನಂಗಡಿಯ ವತಿಯಿಂದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿನಾಗವೃಜ ಕ್ಷೇತ್ರ ಇವರಿಂದ ಶ್ರೀ ತುಳಸಿ ಯಕ್ಷಗಾನ ಪ್ರದರ್ಶನ ನಡೆದು , ಸದ್ರಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನದ ಗೌರವ ಸಲ್ಲಿಸಲಾಯಿತು.




ಮಾ.೩ರಂದು ಪ್ರಾತಃಕಾಲದಲ್ಲಿ ನೇತ್ರಾವತಿ- ಕುಮಾರಧಾರ ನದಿಗಳ ಸಂಗಮ ಸ್ಥಳದಲ್ಲಿ ನೂರಾರು ಭಕ್ತರು ತೀರ್ಥಸ್ನಾನ ನಡೆಸಿದರು. ಬೆಳಗ್ಗೆ ಶ್ರೀ ದೇವಾಲಯದಲ್ಲಿ ಬಲಿ ಹೊರಟು ಉತ್ಸವ, ದರ್ಶನಬಲಿ, ಬಟ್ಟಲು ಕಾಣಿಕೆ ನಡೆಯಿತು ಹಾಗೂ ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಟ್ಟು ಮಹಾಪೂಜೆ ನಡೆಯಿತು. ಬಳಿಕ ಚಂದ್ರಗ್ರಹಣ ದ ಕಾರಣಕ್ಕೆ ದೇವಾಲಯದ ದ್ವಜ ಸ್ತಂಭದಿಂದ ದ್ವಜವನ್ನು ಅವರೋಹಣಗೊಳಿಸಿ ಗ್ರಹಣ ಮೋಕ್ಷಗೊಂಡ ಬಳಿಕ ಮತ್ತೆ ದ್ವಜಾರೋಹಣ ಮಾಡಲಾಯಿತು. ಸಂಜೆ ಉತ್ಸವ ನಡೆಯಿತು.
ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್, ಸಮಿತಿ ಸದಸ್ಯರಾದ ಹರೀಶ್ ಉಪಾಧ್ಯಾಯ, ಸೋಮನಾಥ, ಡಾ. ರಮ್ಯಾ ರಾಜಾರಾಮ್, ಅನಿತಾ ಕೇಶವ ಗೌಡ, ಬಿ. ಗೋಪಾಲಕೃಷ್ಣ ರೈ, ಜಿ. ಕೃಷ್ಣ ರಾವ್ ಅರ್ತಿಲ, ದೇವಿದಾಸ್ ರೈ ಬಿ., ಎಂ. ವೆಂಕಪ್ಪ ಪೂಜಾರಿ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಕವಿತ ಎಂ., ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಕೃಷ್ಣ ಪ್ರಸಾದ್ ಬಡಿಲ, ದಿವಾಕರ, ಪದ್ಮನಾಭ, ಸುಧಾಕರ ಶೆಟ್ಟಿ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್ಯಕ್ರಮ ನಿರ್ವಹಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಪಟ್ಲ ಸತೀಶ್ ಶೆಟ್ಟಿ, ಚಂದಪ್ಪ ಮೂಲ್ಯ, ರಾಮಚಂದ್ರ ಮಣಿಯಾಣಿ, ಡಾ. ರಾಜಾರಾಮ್ ಕೆ.ಬಿ., ಸುರೇಶ್ ಅತ್ರಮಜಲು, ಉದಯಕುಮಾರ್ ಉದಯಗಿರಿ, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ದಿನೇಶ್ ಬೊಳ್ಳಾರ್, ಕೈಲಾರು ರಾಜಗೋಪಾಲ ಭಟ್, ಜಯಂತ ಪೊರೋಳಿ, ಚಂದ್ರಶೇಖರ ಮಡಿವಾಳ, ಸುಂದರ ಗೌಡ, ಸುದರ್ಶನ ಎಂ, ಯು ರಾಮ , ಹರಿರಾಮಚಂದ್ರ , ಮಹೇಶ್ ಬಜತ್ತೂರು, ಕಂಗ್ವೆ ವಿಶ್ವನಾಥ ಶೆಟ್ಟಿ, ಸುಜೀರ್ ಗಣಪತಿ ನಾಯಕ್, ಕೆ. ಬಾಲಚಂದ್ರ ಶೆಟ್ಟಿ, , ಕೈಲಾರ್ ರಾಜಗೋಪಾಲ ಭಟ್, ಕೆ. ಜಗದೀಶ್ ಶೆಟ್ಟಿ, ಶರತ್ ಕೋಟೆ, ರವೀಶ್ ಎಚ್.ಟಿ., ಯು.ಜಿ. ರಾಧಾ, ಜಯಪ್ರಕಾಶ್ ಶೆಟ್ಟಿ, ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್, ಸಚಿನ್ ಎ ಎಸ್, ತಿಮ್ಮಪ್ಪ ಗೌಡ , ರವಿ ಇಳಂತಿಲ, ವಂದನಾ ಶರತ್ ಮತ್ತಿತರರು ಉಪಸ್ಥಿತರಿದ್ದರು.










