






ಮಾಣಿಲ: ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.3ರಂದು ಆಯೋಜಿಸಲಾದ ಆಹ್ವಾನಿತ ತಂಡಗಳ ನೃತ್ಯ ವಿನೋದಾವಳಿ ಸ್ಪರ್ಧೆ 2026ರಲ್ಲಿ ವಿಶ್ವಗುರು ಭರತನಾಟ್ಯ ಮತ್ತು ಸಂಗೀತ ಕಲಾ ಶಾಲೆ ತಂಡವು ಭಾಗವಹಿಸಿ ಮನಮೋಹಕ ಪ್ರದರ್ಶನ ನೀಡಿ ತೃತೀಯ ಸ್ಥಾನವನ್ನು ಪಡೆದಿದೆ.



ತಂಡವು ಸಂಸ್ಕೃತಿಯ ಸೊಬಗನ್ನು ಮೆರೆಯುವ ಭರತನಾಟ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನ ಗೆದ್ದು ಜನಮೆಚ್ಚುಗೆ ಪಡೆದಿತು. ನೃತ್ಯ ಸಂಯೋಜನೆಯನ್ನು ವಿದುಷಿ ಭಾಗ್ಯಶ್ರೀ ರೈ ಹಾಗೂ ವಿಂದ್ಯಾಶ್ರೀ ರೈ ಅವರು ನಿಪುಣತೆಯಿಂದ ನಿರ್ವಹಿಸಿದರು.



ಈ ಸ್ಪರ್ಧೆಯಲ್ಲಿ ಧೃತಿ ಎಚ್ ರೈ, ಸಾನ್ವಿ ಎಸ್ ರೈ, ಹಿತಾ ಶೆಟ್ಟಿ, ಧನ್ವಿ ಎನ್ ರಾವ್, ಮನ್ವೇಷ್ ಶೆಟ್ಟಿ, ಮನೀಷಾ ರಾವ್, ಧನ್ವಿ ವಿ ಶೆಟ್ಟಿ, ತ್ವಿಷಾ ರಾವ್, ಜಿತೇಶ್ ಶೆಟ್ಟಿ, ಶರಣ್ಯ ಹೆಚ್, ವೃಂದ ಕೆ, ಯಶಿಕಾ ರಾವ್ ಮತ್ತು ಶೃಂಗ ಎಸ್ ರೈ ಭಾಗವಹಿಸಿ ಗಮನಾರ್ಹ ಪ್ರದರ್ಶನ ನೀಡಿದರು.
ತಂಡದ ಸಾಧನೆಗೆ ದೇವಸ್ಥಾನ ಸಮಿತಿ ಸದಸ್ಯರು, ಪೋಷಕರು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.










